ಬಂತು ಟ್ರಂಪ್ ಹೊಸ ಫೋನ್– ಮೊಬೈಲ್ ಉದ್ಯಮಕ್ಕೆ ಟ್ರಂಪ್, ಬೆಲೆ ಎಷ್ಟು?

Washington: ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಈಗ ಮೊಬೈಲ್ ಫೋನ್ ಮತ್ತು ವಯರ್‌ಲೆಸ್ ಸೇವಾ ಉದ್ಯಮದ ಮಾಲೀಕ. ಟ್ರಂಪ್ ಈಗ Trump Mobile T1 Phone ಹೆಸರಿನಲ್ಲಿ ಆಂಡ್ರಾಯ್ಡ್ ಫೋನ್ ಮಾರುಕಟ್ಟೆ ಬಿಡುಗಡೆ ಮಾಡಿದ್ದಾರೆ.

ಥೇಟ್ ಡೋನಾಲ್ಡ್ ಟ್ರಂಪ್ ರ ಮೈ ಬಣ್ಣಕ್ಕೆ ಹೋಲುವ ಚಿನ್ನದ ಬಣ್ಣದ ಫೋನ್ ಇದಾಗಿದ್ದು ದರವನ್ನು ಕೂಡಾ ಈಗಾಗಲೇ ನಿಗದಿ ಮಾಡಲಾಗಿದೆ. ಈ ಫೋನು ಭಾರತದ ಗ್ರಾಹಕರ ಕೈಗೆಟುಕುವ ದರದಲ್ಲಿದೆ. 499 ಡಾಲರ್ (ಅಂದಾಜು 43,000 ರೂ.) ನ ಈ ಫೋನನ್ನು ಅಮೆರಿಕದಲ್ಲೇ ಉತ್ಪಾದನೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. The Trump Organization ನಲ್ಲಿ ಡೊನಾಲ್ಡ್ ಟ್ರಂಪ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿದ್ದಾರೆ.
ಇದೀಗ T1 ಮೊಬೈಲ್ ಸೇವೆಯು ʼ47 ಪ್ಲಾನ್ʼ ಹೆಸರಿನ ಸೇವೆಯನ್ನು ನೀಡುತ್ತಿದೆ. ಟ್ರಂಪ್ ರವರು ಅಮೆರಿಕದ 47ನೇ ಅಧ್ಯಕ್ಷರಾದ ಕಾರಣಕ್ಕೆ ಈ ಸೇವೆಗೆ 47 ಪ್ಲಾನ್ ಎಂಬ ಹೆಸರನ್ನು ಇಡಲಾಗಿದೆ. ಟ್ರಂಪ್ ಮೊಬೈಲ್ ಅಮೆರಿಕದ ಟೆಲಿಕಾಂ ದೈತ್ಯ ಕಂಪನಿಗಳಾದ Verizon, AT&T ಮತ್ತು T-Mobile ನಿಯಂತ್ರಣ ಇರುವ ನೆಟ್‌ವರ್ಕ್‌ಗಳ ಮೂಲಕ ಸೇವೆ ಒದಗಿಸುತ್ತದೆ. 5G ಸೇವೆಗೆ ಮಾಸಿಕ 47.45 ಡಾಲರ್ (4,097 ರೂ.) ದರವನ್ನು ನಿಗದಿ ಮಾಡಲಾಗಿದೆ.
ಟ್ರಂಪ್ ಫೋನಿನ ವೈಶಿಷ್ಟ್ಯಗಳೇನು?
6.78 ಇಂಚಿನ AMOLED ಸ್ಕ್ರೀನ್, 1080 x 2460 ಪಿಕ್ಸೆಲ್, ನ್ಯಾನೋ ಸಿಮ್ + ಇ ಸಿಮ್ ಅನ್ನು ಕೂಡಾ ಇದಕ್ಕೆ ಹಾಕಬಹುದಾಗಿದ್ದು ಅಕ್ಟಾಕೋರ್ ಪ್ರೊಸೆಸರ್‌ನೊಂದಿಗೆ ಇದು ಬಂದಿದೆ. ಜತೆಗೆ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಂ, 12GB RAM, 256GB ಆಂತರಿಕ ಮೆಮೊರಿ ಹೊಂದಿದ್ದು ಕಾರ್ಡ್ ಮೂಲಕ ಹೆಚ್ಚುವರಿ ಮೆಮೊರಿ ವಿಸ್ತರಿಸಬಲ್ಲ ಅವಕಾಶವಿದೆ.
50 ಎಂಪಿ (ವೈಡ್), 2 ಎಂಪಿ(ಮ್ಯಾಕ್ರೋ), 2 ಎಂಪಿ(ಡೆಪ್ತ್) ಕ್ಯಾಮೆರಾವನ್ನು ಹಿಂದುಗಡೆ ಕೊಟ್ಟರೆ, ಮುಂದುಗಡೆ 16 ಎಂಪಿ ಕ್ಯಾಮೆರಾವನ್ನು ಹೊಂದಿದೆ. 5000 mAh ಬ್ಯಾಟರಿ ಪವರಿನೊಂದಿಗೆ ಟ್ರಂಪ್ ಫೋನ್ ಅಮೇರಿಕಾದಲ್ಲಿ ರಿಂಗ್ ಆಗಲು ಶುರುವಾಗಿದೆ.
Comments are closed.