Thuglife Cinema: ‘ಥಗ್‌ಲೈಫ್‌ʼ ಸಿನಿಮಾ ಕರ್ನಾಟಕದಲ್ಲಿ ರಿಲೀಸ್‌: ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ನೋಟಿಸ್‌

Share the Article

Thug Life Cinema: ಕಮಲ್‌ ಹಾಸನ್‌ ನಟನೆಯ ಥಗ್‌ಲೈಫ್‌ ಸಿನಿಮಾ ರಿಲೀಸ್‌ಗೆ ಸುಪ್ರೀಂ ಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಇದೀಗ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಕರವೇ ನಾರಾಯಣ ಗೌಡ, ಪ್ರವೀಣ್‌ ಶೆಟ್ಟಿ ಸೇರಿ ಕನ್ನಡ ಪರ ಸಂಘಟನೆಯ ಪ್ರಮುಖರಿಗೆ ಮಂಗಳವಾರ ನೋಟಿಸ್‌ ಕೊಡಲಾಗಿದೆ. ಚಿತ್ರಬಿಡುಗಡೆಗೆ ತಡೆ ನೀಡುವ ನಿಟ್ಟಿನಲ್ಲಿ ಆದೇಶ ಮೀರಿ ಹೋರಾಟಕ್ಕೆ ಮುಂದಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಮಾಡುವ ಉದ್ದೇಶವಿದ್ದರೆ ಫ್ರೀಡಂ ಪಾರ್ಕ್‌ನಲ್ಲಿ ಮಾತ್ರ ಮಾಡಬೇಕು. ಚಿತ್ರಮಂದಿರದ ಬಳಿ ಹೋಗಿ ಪ್ರತಿಭಟನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ನೋಟಿಸ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

Comments are closed.