Narendra Modi: ಆಪರೇಷನ್ ಸಿಂಧೂರಕ್ಕೆ ವಿರಾಮ ಕುರಿತಾಗಿ ಟ್ರಂಪ್ ಗೆ ಸ್ಪಷ್ಟನೆ ನೀಡಿದ ಮೋದಿ

Share the Article

Narendra Modi:ಪಾಕಿಸ್ತಾನ ವಿನಂತಿ ಮಾಡಿದ್ದರ ಮೇರೆಗೆ ಆಪರೇಷನ್ ಸಿಂಧೂರವನ್ನು ನಿಲ್ಲಿಸಲಾಯಿತು ಎಂದು ಪ್ರಧಾನಿ ಮೋದಿ ದೂರವಾಣಿ ಮೂಲಕ ಅಮೆರಿಕ ಅಧ್ಯಕ್ಷ ಟ್ರಂಪ್ಗೆ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ಅಮೆರಿಕ ಅಧ್ಯಕ್ಷರಾಗಿ ಕರೆ ಮಾಡಿದ ನರೇಂದ್ರ ಮೋದಿ 35 ನಿಮಿಷಗಳ ಕಾಲ ಮಾತನಾಡುವ ಮೂಲಕ ಪಾಕಿಸ್ತಾನದ ಭಯೋತ್ಪಾದನೆ ಕುರಿತು ವಿವರಣೆ ನೀಡಿದ್ದಾರೆ. ಹಾಗೂ ಭಯೋತ್ಪಾದನೆಯನ್ನು ಬೆಂಬಲಿಸುವ ದೇಶಗಳು ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿರಾಮವನ್ನು ನೀಡಲು ಯಾವುದೇ ವ್ಯಾಪಾರದ ಕುರಿತಾದ ಕಾರಣಗಳನ್ನು ನೀಡಿಲ್ಲ ಮತ್ತು ಭಾರತವು ಎಂದಿಗೂ ಮೂರನೆಯ ವ್ಯಕ್ತಿಯ ಮಧ್ಯಸ್ಥಿಕೆಯನ್ನು ಒಪ್ಪುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಶ್ರಿ ಹೇಳಿದ್ದಾರೆ.

Comments are closed.