Kalaburgi: ಪುಣ್ಯ ಸ್ನಾನಕ್ಕೆಂದು ಇಳಿದವ ನೀರು ಪಾಲು!

Kalaburagi: ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವಾಗ ಯುವಕನೊಬ್ಬ ಕೊಚ್ಚಿ ಹೋಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಖಜೂರಿ ಗ್ರಾಮದ ಲಕ್ಷ್ಮಿಕಾಂತ ಎಂಬ ಯುವಕ ಕೊಚ್ಚಿ ಹೋಗಿದ್ದಾನೆಂದು ಗುರುತಿಸಲಾಗಿದ್ದು, ಕಲಬುರ್ಗಿ ಜಿಲ್ಲೆಯ ಅಫ್ಜಲ್ಪುರ ತಾಲೂಕಿನ ಗಾಣಗಾಪುರಕ್ಕೆ ದತ್ತಾತ್ರೇಯ ಸ್ವಾಮಿ ದರ್ಶನಕ್ಕೆ ಕುಟುಂಬ ಸಮೇತ ಬಂದಿದ್ದರು ಎಂದು ಹೇಳಲಾಗುತ್ತಿದೆ.
ಕುಟುಂಬದ ನಾಲ್ವರು ನದಿಗೆ ಇಳಿದಿದ್ದು ಲಕ್ಷ್ಮಿಕಾಂತ ಕೊಚ್ಚಿ ಹೋಗಿರುತ್ತಾರೆ ಮತ್ತು ಉಳಿದ ಮೂವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಇನ್ನು ಈ ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
Comments are closed.