Goa: ಮದುವೆಯಾಗುತ್ತೇನೆ ಎಂದು ನಂಬಿಸಿ ಪ್ರೇಯಸಿಯ ಹತ್ಯೆ

Goa: ಮದುವೆಯಾಗುತ್ತೇನೆ ಎಂದು ನಂಬಿಸಿ ಗೋವಾಗೆ ಕರೆದೊಯ್ದು ಪ್ರೇಯಸಿಯನ್ನು ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ.

ಆರೋಪಿಯನ್ನು ಬೆಂಗಳೂರು ಉತ್ತರ ಭಾಗದ ಸಂಜಯ್ ಕೆವಿನ್ ಎಂದು ಗುರುತಿಸಲಾಗಿದ್ದು, ರೋಶನಿ ಮೋಸೆಸ್ (22) ಕೂಡ ಅದೇ ಭಾಗದವರು. ಇನ್ನು ಹತ್ಯೆಗೈದ ನಂತರ ಆರೋಪಿ ಬೆಂಗಳೂರಿಗೆ ಪರಾರಿಯಾಗಿದ್ದಾನೆ ಎನ್ನಲಾಗುತ್ತಿದೆ.
ಇನ್ನು ಪೊಲೀಸ್ ಮೂಲಗಳ ಪ್ರಕಾರ ಈ ಇಬ್ಬರು ಜೋಡಿಗಳು ಮದುವೆಯಾಗಲು ಗೋವಾಗೆ ಹೋಗಿದ್ದು, ಇಬ್ಬರ ನಡುವೆ ಜಗಳ ಉಂಟಾಗಿ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.
Comments are closed.