Rachita Ram: ರಚಿತಾ ರಾಮ್ ವಿರುದ್ಧ ದೂರು ದಾಖಲು – ನಟಿಯ ವಿರುದ್ಧ ತಿರುಗಿ ಬಿದ್ದ ಇಡೀ ಚಿತ್ರತಂಡ !!

Share the Article

Rachita Ram: ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಸಂಜು ವೆಡ್ಸ್‌ ಗೀತಾ 2 ಸಿನಿಮಾ ನಿರ್ದೇಶಕ ನಾಗಶೇಖರ್ ಅವರು ಕಲಾವಿದರ ಸಂಘ ಮತ್ತು ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ಅಲ್ಲದೆ ರಚಿತಾ ರಾಮ್‌ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

 

ಹೌದು, ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ಬಾರದ ರಚಿತಾ ರಾಮ್‌ ಬಾರದ ಕಾರಣಕ್ಕೆ ಈ ಅಸಮಾಧಾನ ಹುಟ್ಟಿಕೊಂಡಿದೆ. ನಟಿಯ ನಡೆಯ ವಿರುದ್ಧ ತಿರುಗಿ ಚಿತ್ರತಂಡ ಬಿದ್ದಿದೆ. ನಾವು ಇಂತಹ ಕಲಾವಿದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಮ್ಮ ಸಿನಿಮಾ ಪ್ರಚಾರಕ್ಕೆ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್ಲೈನ್ ವೆಂಕಟೇಶ್ ಮನವೊಲಿಸಲು ಪ್ರಯತ್ನಿಸಿದ್ರು. ಆದರೆ ರಚಿತಾ ರಾಮ್‌ ಒಪ್ಪಿಲ್ಲ. ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ ಎಂದು ನಿರ್ದೇಶಕ ನಾಗಶೇಖರ್ ಹೇಳಿದ್ದಾರೆ.

 

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜೂನ್ 6ಕ್ಕೆ ಚಿತ್ರ ಮರು ಬಿಡುಗಡೆಯಾಗುತ್ತಿದೆ ಎಂದು ಹೇಳಿರುವುದನ್ನು ಹೊರತು ಪಡಿಸಿದರೆ ರಚಿತಾ ಬೇರೆ ಎಲ್ಲಿಯೂ ಕೂಡ ಚಿತ್ರದ ಕುರಿತು ಮಾತನಾಡುವ ಗೋಜಿಗೆ ಹೋಗಿಲ್ಲ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ನಿರ್ದೇಶಕ ನಾಗಶೇಖರ್ ಸದ್ಯ ರಚಿತಾ ರಾಮ್ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿದ್ದಾರೆ. ನಾಗ್‌ಶೇಖರ್ ಅವರ ಜೊತೆ ಶ್ರೀನಗರ ಕಿಟ್ಟಿ ಕೂಡ ಈ ವಿಚಾರದಲ್ಲಿ ಜೊತೆ ನಿಂತಿದ್ದಾರೆ.

 

ಸದ್ಯ ರಚಿತಾ ರಾಮ್ ವಿರುದ್ದ ನಾಗಶೇಖರ್, ಶ್ರೀನಗರ ಕಿಟ್ಟಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದು ರಚಿತಾ ರಾಮ್ ಈ ವಿಚಾರಕ್ಕೆ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

Comments are closed.