ನಿಷೇಧಿತ ಬೆಟ್ಟಿಂಗ್ ಆಪ್ ಪ್ರಚಾರ ಪ್ರಕರಣ: ಇ.ಡಿ ಸೆಲೆಬ್ರೆಟಿಗಳ ವಿಚಾರಣೆ

Mumbai: ಇ.ಡಿ ನಿಷೇಧಿತ ಆನ್ಲೈನ್ ಬೆಟ್ಟಿಂಗ್ ಆಪ್ ಗಳ ಜಾಹೀರಾತು ಮತ್ತು ಪ್ರಚಾರಕ್ಕೆ ಸಂಬಂಧಿಸಿದಂತೆ, ಹಲವು ಖ್ಯಾತ ಸೆಲೆಬ್ರಿಟಿಗಳನ್ನು ವಿಚಾರಣೆಗೆ ಒಳಪಡಿಸಿದೆ.

1xBet, FairPlay, Parimatch, Lotus365 ಸೇರಿದಂತೆ ನಿಷೇಧಿತ ಬೆಟ್ಟಿಂಗ್ ವೇದಿಕೆಗಳ ಜಾಹೀರಾತುಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗರು ಹರ್ಭಜನ್ ಸಿಂಗ್, ಸುರೇಶ್ ರೈನಾ, ಯುವರಾಜ್ ಸಿಂಗ್ ಹಾಗೂ ನಟ ಸೋನು ಸೂದ್ ಮತ್ತು ನಟಿ ಊರ್ವಶಿ ರೌಟೇಲಾ ಅವರನ್ನು ED ವಿಚಾರಣೆ ನಡೆಸಿದೆಯೆಂದು ತಿಳಿದು ಬಂದಿದೆ.
ಈ ಆಪ್ ಗಳು ತಮ್ಮ ಪ್ರಚಾರಕ್ಕಾಗಿ ಸೆಲಬ್ರೆಟಿಗಳಿಗೆ 50 ಕೋಟಿಗೂ ಹೆಚ್ಚು ಹಣವನ್ನು ನೀಡಿದೆ ಎಂದು ಇಡಿ ಅಧಿಕಾರಿಗಳು ಶಂಕಿಸಿದ್ದಾರೆ.
Comments are closed.