Tiger: ರಸ್ತೆ ಪಕ್ಕದ ಕಿರು ಸೇತುವೆಯ ಕಟ್ಟೆ ಮೇಲೆ ಕುಳಿತು ಘರ್ಜಿಸಿದ ವ್ಯಾಘ್ರ! ಆತಂಕದಲ್ಲಿ ಗ್ರಾಮಸ್ಥರು

Tiger: ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮದಲ್ಲಿ ಹುಲಿಯೊಂದು ರಸ್ತೆ ದಾಟಿ ಸದ್ದು ಮಾಡಿದ್ದರೆ, ಪಕ್ಕದ ಮೈಸೂರು ಜಿಲ್ಲೆಯ ಕಬಿನಿಯಲ್ಲಿ ಕಿರು ಸೇತುವೆಯ ಕಟ್ಟೆ ಮೇಲೆ ಕುಳಿತು ಘರ್ಜಿಸಿ ಬೆಚ್ಚಿ ಬೀಳಿಸಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದೆ. ರಸ್ತೆ ಪಕ್ಕದ ಕಿರು ಸೇತುವೆಯ ಕಟ್ಟೆ ಮೇಲೆ ವಿರಾಜಮಾನವಾಗಿ ಆಸೀನವಾಗಿರುವ ವ್ಯಾಘ್ರ ಜೋರಾಗಿ ಘರ್ಜನೆ ಮಾಡುತ್ತಿದ್ದ ಅಪರೂಪದ ದೃಶ್ಯ ಸಫಾರಿಯ ವೇಳೆ ವ್ಯಕ್ತಿ ಯೊಬ್ಬರ ಕ್ಯಾಮರಾದಲ್ಲಿ ಸೆರೆಯಾಗಿದೆ. ಹುಲಿರಾಯನ ಘರ್ಜನೆ ಬೆಚ್ಚಿಬೀಳಿಸುವಂತಿದೆ.
Comments are closed.