Karnataka: ಕರ್ನಾಟಕಕ್ಕೆ ಬರುತ್ತಿದ್ದ ಮಸಾಲೆ, ಡ್ರೈಫ್ರೂಟ್ಸ್ ಸಪ್ಲೈ ಬಂದ್!

Karnataka: ಇರಾನ್ (Iran) ಮತ್ತು ಇಸ್ರೇಲ್ (Israel) ನಡುವಿನ ಯುದ್ಧದ ಪರಿಣಾಮ ಇರಾನ್‌ನಿಂದ ಕರ್ನಾಟಕಕ್ಕೆ ಬರುತ್ತಿದ್ದ ಐಟಮ್ಸ್ಗಳ ಸರಬರಾಜು ನಿಂತಿದ್ದು, ವ್ಯಾಪಾರಿಗಳಲ್ಲಿ ಆತಂಕವನ್ನುಂಟು ಮಾಡಿದೆ.

ಇರಾನ್ ದೇಶ ಹಣ್ಣಿನ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಕೇವಲ ಹಣ್ಣುಗಳು ಮಾತ್ರವಲ್ಲ, ಡ್ರೈಫ್ರೂಟ್ಸ್ ಹಾಗೂ ಮಸಾಲೆ ಪದಾರ್ಥಗಳು ಅತ್ಯಂತ ಗುಣಮಟ್ಟದಿಂದ ಕೂಡಿರುತ್ತವೆ. ಈ ಹಿನ್ನೆಲೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ಇರಾನ್‌ನಿಂದ ಡ್ರೈಫ್ರೂಟ್ಸ್ ಆಮದು ಮಾಡಿಕೊಳ್ಳುತ್ತವೆ. ಇದೀಗ ಇರಾನ್ ಹಾಗೂ ಇಸ್ರೇಲ್ ಯುದ್ಧದ ಪರಿಣಾಮ ಭಾರತದ ಮೇಲೆ ತಟ್ಟಿದೆ. ಪ್ರಮುಖವಾಗಿ ಇರಾನ್ ಬಂಡಾರ್ ಅಬ್ಬಾಸ್ ಬಂದರು ಬ್ಲಾಸ್ಟ್ ಆದ ಹಿನ್ನೆಲೆ ಇರಾನ್‌ನ ಸೇಬು, ಮಸಾಲೆ ಐಟಮ್ಸ್, ಡ್ರೈಫ್ರೂಟ್ಸ್‌ಗಳು ಬೆಂಗಳೂರಿಗೆ ರಫ್ತಾಗುವುದು ಬಂದ್ ಆಗಿದೆ.
ಏನೆಲ್ಲ ರಫ್ತು ಬಂದ್:
ಇರಾನ್ ಸೇಬು, ಮಸಾಲೆ ಪದಾರ್ಥ,ಗಸಗಸೆ
,ಡ್ರೈಫ್ರೂಟ್ಸ್,ಖರ್ಜೂರ,ನೆಟಾಲ್ ಒಣದ್ರಾಕ್ಷಿ,ಪಿಸ್ತಾ, ಪೈನಾಬೀಜ, ಮುಜಪತಿ ಖರ್ಜೂರ, ಗಸಗಸೆ, ನೆಟಾಲ್ ಒಣದ್ರಾಕ್ಷಿ, ಅಂಜೂರ, ಮೇಥಿ, ಮಾರ್ಮಾ ಬಾದಾಮಿ ಬೆಂಗಳೂರಿಗೆ ಸಪ್ಲೈ ಆಗುತ್ತಿಲ್ಲ.
ಪ್ರಮುಖವಾಗಿ ಕೆ.ಜಿ ಗಸಗಸಗೆ 2,500 ರೂ. ಆಗಿದೆ. ಪೈನಾಬೀಜಾ ಸಹ ಹತ್ತು ಸಾವಿರದ ಗಡಿ ದಾಟಿದೆ. ಇರಾನ್ ಸೇಬು ಪ್ರತಿದಿನ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಗೆ 70-80 ಕಂಟೇನರ್ ಬರುತ್ತಿತ್ತು. ಆದರೆ ಕಳೆದು ಮೂರು-ನಾಲ್ಕು ದಿನದಿಂದ ಬರುತ್ತಿಲ್ಲ ಎಂದು ಹಣ್ಣಿನ ವ್ಯಾಪಾರಿಗಳು ಹೇಳುತ್ತಿದ್ದಾರೆ.
Comments are closed.