New Delhi: ಈಜುಕೊಳದಲ್ಲಿ ಮುಳುಗಿ ಆರು ವರ್ಷದ ಬಾಲಕ ಸಾವು

Share the Article

New Delhi: ಈಜುಕೊಳದಲ್ಲಿ ಮುಳುಗಿ ಆರು ವರ್ಷದ ಬಾಲಕನೊಬ್ಬ ಸಾವಿಗೀಡಾದ ಘಟನೆ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ತಕ್ಷ್‌ ರಾಥಿ ಮೃತ ಬಾಲಕ. ವಾಯುವ್ಯ ದೆಹಲಿಯ ಪಿತಾಂಪುರದಲ್ಲಿನ ಈಜುಕೊಳದಲ್ಲಿ ಈ ಘಟನೆ ನಡೆದಿದೆ.

ತನ್ನ ಪ್ರದೇಶದ ಇತರ ಕೆಲ ಮಕ್ಕಳ ಜೊತೆ ದೆಹಲಿಯ ಪಿತಾಂಪುರದ ಈಜುಕೊಳಕ್ಕೆ ಈಜುವುದಕ್ಕಾಗಿ ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ತಕ್ಷ್‌ ರಾಥಿ ಮಂಜಿತ್‌ ಕುಮಾರ್‌ ಎಂಬುವವರ ಪುತ್ರನಾಗಿದ್ದು, ಈಜುಕೊಳದಲ್ಲಿ ಮುಳುಗಿದ ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕೂಡಲೇ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರು ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದರು.

ದೆಹಲಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರುವ ಪಿತಾಂಪುರದ ಮಲಿಕ್‌ ಸ್ವಿಮ್ಮಿಂಗ್‌ ಪೂಲ್‌ನಲ್ಲಿ ಈ ಘಟನೆ ನಡೆದಿದೆ.

Comments are closed.