Shabaj Sharif: ‘ನಾನು ಕಾಂಡೋಮ್ ಬಳಸುತ್ತೇನೆ’ ಎಂದ ಶೆಹಬಾಜ್ ಷರೀಫ್ – ಪಾಕ್ ಪ್ರಧಾನಿ ಸಿಕ್ಕಾಪಟ್ಟೆ ಟ್ರೋಲ್!!

Share the Article

Shahabaj Sharif: ಪಾಕಿಸ್ತಾನದ ಪ್ರಧಾನಿ ಶಹಬಾಜ್ ಶರೀಫ್ ಅವರು ಪೋಸ್ಟ್ ಮಾಡುವ ವೇಳೆ ಎಡವಟ್ಟು ಮಾಡಿಕೊಂಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಾ, ಟ್ರೋಲಿಗರ ಬಾಯಿಗೆ ತುತ್ತಾಗಿದ್ದಾರೆ.

ಹೌದು, ಇಸ್ರೇಲ್-ಇರಾನ್ ಯುದ್ಧದ ಮಧ್ಯೆ, ಅವರು ತಮ್ಮ ಸ್ನೇಹಿತ, ಇರಾನ್‌ನ ಸುಪ್ರೀಂ ಲೀಡರ್ ಆಯತೊಲ್ಲಾ ಖಮೇನಿ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಮಾಡಿದ್ದಾರೆ. ಆದರೆ, ಈ ವೇಳೆ, ಭಾರೀ ಎಡವಟ್ಟಿನಿಂದ ಅವರು ಗೇಲಿಗೊಳಗಾಗಿದ್ದಾರೆ. ಅದೇನೆಂದರೆ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್​ನಿಂದ ಇಸ್ರೇಲಿ ದಾಳಿಯನ್ನು ಖಂಡಿಸುತ್ತಾ, ಅವರು ಇಂಗ್ಲಿಷ್‌ನಲ್ಲಿ ಖಂಡಿಸುವ ಬದಲು ಕಾಂಡೋಮ್ ಎಂದು ಬರೆದಿದ್ದಾರೆ. ಇದಕ್ಕಾಗಿಯೇ ಅವರನ್ನು ಈ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ.

ಪೋಸ್ಟ್‌ನಲ್ಲಿ ಶೆಹಬಾಜ್ ಷರೀಫ್ ಬರೆದಿದ್ದೇನು?

‘I strongly condom today’s unprovoked Israeli aggression against Iran…’

‘I strongly condom today’s unprovoked Israeli aggression against Iran…’

ಈ ಒಂದು ಅಕ್ಷರದ ತಪ್ಪು ಅವರ ಹಾಸ್ಯಾ ಮಾಡುವ ಸ್ಥಿತಿ ಬಂದಿತ್ತು. ಬಹುತೇಕ ಜನರು ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ತೆಗೆದು ವೈರಲ್ ಮಾಡಿದ್ದು, ಹಾಸ್ಯ, ಮೀಮ್ಸ್, ಜೋಕ್ಸ್ ಗಳಿಗೆ ಅಡ್ಡಿಲ್ಲದಂತೆ ಮಾಡಿದ್ದಾರೆ.

Comments are closed.