Puttur: ಪುತ್ತೂರು: ಮನೆ ಮೇಲೆ ಬಿದ್ದ ಬೃಹತ್ ಬೀಟಿ ಮರ!!

Share the Article

Puttur: ಪುತ್ತೂರು (puttur ) ಅರಿಯಡ್ಕ ಗ್ರಾಮದ ನೇರೋಳಡ್ಕದಲ್ಲಿ ಕೂಲಿ ಕಾರ್ಮಿಕೆಯ ಜಯಂತಿ ಅವರ ಮನೆಗೆ ಮಂಗಳವಾರ ಬೆಳಿಗ್ಗೆ ಬೃಹತ್ ಗಾತ್ರದ ಬೀಟಿ ಮರ ಬಿದ್ದಿದೆ.

ಮರ ಬಿದ್ದು ಮನೆಗೆ ಹಾನಿಯಾಗಿದ್ದು, ಸುಮಾರು 2 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮನೆ ಮೇಲೆ ಅಳವಡಿಸಿದ್ದ ಶೀಟ್ ಪೂರ್ಣ ಹಾನಿಯಾಗಿದೆ. ಮನೆಯೊಳಗಡೆಯಿದ್ದ ಜಯಂತಿ ಹಾಗೂ ಅವರ ಮಕ್ಕಳಾದ ಧನ್‌’ರಾಜ್, ಚೇತನ್‌’ರಾಜ್‌ ಅಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅರಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ, ಸದಸ್ಯ ಹರೀಶ್ ರೈ ಜಾರತ್ತಾರು, ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ.

Comments are closed.