ದಕ್ಷಿಣಕನ್ನಡದ ಜಿಲ್ಲಾಧಿಕಾರಿ, ಮಕ್ಕಳ ‘ರಜೆ ಕೊಡುವ ಡಿಸಿ’ ಮುಲ್ಲೈ ಮುಗಿಲನ್ ವರ್ಗಾವಣೆ, ನೂತನ ಡಿಸಿ ದರ್ಶನ್!

Share the Article

ಮಂಗಳೂರು: ಕರಾವಳಿಯ ಪ್ರೀತಿಯ ಮಕ್ಕಳ ರಜೆ ಕೊಡುವ ಡಿಸಿಯ ವರ್ಗಾವಣೆಯಾಗಿದೆ. ರಾಜ್ಯದಲ್ಲಿ 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದ್ದು, ಅದರಲ್ಲಿ ಕಳೆದ 2 ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲೈ ಮುಗಿಲನ್ ಅವರನ್ನು ಕೂಡಾ ದಿಢೀರ್ ಆಗಿ ವರ್ಗಾಯಿಸಿದೆ. ಅವರನ್ನು ಬೆಂಗಳೂರಿನ ನೋಂದಣಿ ಇಲಾಖೆಯ ಐಜಿ ಮತ್ತು ಸ್ಟಾಂಪ್ಸ್ ವಿಭಾಗದ ಕಮಿಷನರ್ ಆಗಿ ವರ್ಗಾಯಿಸಲಾಗಿದೆ.

ರಾಜ್ಯದಲ್ಲಿ ಒಟ್ಟು 16 ಮಂದಿ ಐಎಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ 2016ನೇ ಸಾಲಿನ ಐಎಎಸ್ ಅಧಿಕಾರಿಯಾದ ದರ್ಶನ್ ಎಚ್‌.ವಿ ಅವರನ್ನು ನೇಮಕ ಮಾಡಲಾಗಿದೆ. ಇಲ್ಲಿಯತನಕ ಅವರು ಬೆಂಗಳೂರಿನಲ್ಲಿ ಕಮರ್ಶಿಯಲ್ ಟ್ಯಾಕ್ಸ್ ವಿಭಾಗದ ಎಡಿಷನಲ್‌ ಕಮಿಷನ‌ರ್ ಹುದ್ದೆಯಲ್ಲಿದ್ದರು.

ಮುಲೈ ಮುಗಿಲನ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ 2023ರ ಜನವರಿಯಲ್ಲಿ ನೇಮಕಗೊಂಡಿದ್ದರು. ಕಳೆದ ಎರಡೂವರೆ ವರ್ಷ ಕಾಲ ಅವರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ದಕ್ಷಿಣ ಕನ್ನಡದ ಮಕ್ಕಳ ಪ್ರೀತಿಯ ಜಿಲ್ಲಾಧಿಕಾರಿಯಾದ ಇವರು ರಜೆ ಕೊಡುವ ಡಿಸಿ ಎಂದೇ ಮಕ್ಕಳ ಪಾಲಿಗೆ ಚಿರಪರಿಚಿತರು.

ಇತ್ತೀಚೆಗೆ ಜಿಲ್ಲಾ ಎಸ್ಪಿ ಮತ್ತು ಪೊಲೀಸ್ ಕಮಿಷನ‌ರ್’ರನ್ನು ವರ್ಗಾವಣೆ ಮಾಡಲಾಗಿತ್ತು. ಇನ್ನು ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾರನ್ನೂ ವರ್ಗಾವಣೆ ಮಾಡಲಾಗಿದ್ದು, ಶಿಕ್ಷಣ ಇಲಾಖೆಯ ರಾಜ್ಯ ಯೋಜನಾ ನಿರ್ದೇಶಕರಾಗಿ ಹುದ್ದೆ ನೀಡಲಾಗಿದೆ.

 

Comments are closed.