Bengaluru: ಪರಪ್ಪನ ಅಗ್ರಹಾರ ಮೇಲೆ ಸಿಸಿಬಿ ಪೊಲೀಸರ ದಾಳಿ: ನಿಷೇಧಿತ ವಸ್ತುಗಳು ಪತ್ತೆ

Bengaluru: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ನಿಷೇಧಿತ ವಸ್ತುಗಳು ಜೈಲಿನಲ್ಲಿ ಪತ್ತೆಯಾಗಿವೆ.

ಕಾರಾಗೃಹದ ಸಜಾಬಂದಿ ಬ್ಯಾರಕ್ ಹಾಗೂ ವಿಐಪಿ ಬ್ಯಾರೆಕ್ ಮೇಲೆ ಈ ದಾಳಿ ನಡೆದಿರುತ್ತದೆ. ಈ ವೇಳೆ ಕಸ್ತೂರಿ ಮೇತಿ, ಗಾಂಜಾ ,ತಂಬಾಕು, ಹೊಗೆ ಸೊಪ್ಪು, ಚಾಕು, ಕತ್ತರಿ, ಕಬ್ಬಿಣದ ರಾಡ್, ಮೊಬೈಲ್ ಚಾರ್ಜರ್ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ.
ನಿನ್ನ ಬೆಳಗ್ಗೆ 11 ರಿಂದ ಮಧ್ಯಾಹ್ನ ಎರಡರ ತನಕ ಕಾರ್ಯಾಚರಣೆ ನಡೆದಿದ್ದು, ಸುಮಾರು 50ಕ್ಕೂ ಹೆಚ್ಚು ಸಿಸಿಬಿ ಪೊಲೀಸರು ದಾಳಿ ನಡೆಸಿರುತ್ತಾರೆ ಹಾಗೂ ಹಲವು ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
Comments are closed.