South Florida : ಮೊದಲ ಬಾರಿಗೆ ತಂದೆಯಾದ 135 ವರ್ಷದ ಹಿರಿಯ ಆಮೆ !!

Share the Article

South Florida: ಮೊನ್ನೆ ತಾನೆ ವಿಶ್ವಾದ್ಯಂತ ‘ತಂದೆಯರ ದಿನಾಚರಣೆ’ಯನ್ನು ಆಚರಿಸಿದ್ದಾರೆ. ಇದೇ ಸಮಯಕ್ಕೆ 135 ವರ್ಷದ ಆಮೆ ಒಂದು ಮೊದಲ ಬಾರಿಗೆ ತಂದೆಯಾಗಿದೆ.

ಹೌದು, ದಕ್ಷಿಣ ಫ್ಲೋರಿಡಾ ಮೃಗಾಲಯದ ಅತ್ಯಂತ ಹಿರಿಯ ಆಮೆ ರವಿವಾರ ತನ್ನ 135 ನೇ ಹುಟ್ಟುಹಬ್ಬ ಮತ್ತು ಮೊದಲ ತಂದೆಯ ದಿನವನ್ನು ಆಚರಿಸಿಕೊಂಡು ಹೃದಯಸ್ಪರ್ಶಿ ಘಟನೆಗೆ ಸಾಕ್ಷಿಯಾಗಿದೆ.

ಮಿಯಾಮಿಯ ಮೃಗಾಲಯದಲ್ಲಿ 235 ಕಿಲೋಗ್ರಾಂಗಳಷ್ಟು ತೂಕದ ಗ್ಯಾಲಪಗೋಸ್ ಆಮೆ ಗೋಲಿಯಾತ್ ಈ ತಿಂಗಳ ಆರಂಭದಲ್ಲಿ ಮೊದಲ ಬಾರಿಗೆ ತಂದೆಯಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಗೋಲಿಯಾತ್‌ ತಂದೆಯಾಗುವುದರ ಜತೆಗೆ, ಮಿಯಾಮಿ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿರುವ ಸರೀಸೃಪಗಳಲ್ಲಿ ಒಂದು ಮೊಟ್ಟೆಯಿಂದ ಮರಿ ಹೊರಬಂದದ್ದು ಇದೇ ಮೊದಲಾಗಿದೆ.

ಮರಿ ಆಮೆಯ ತಂದೆ , ತಾಯಿ ತಮ್ಮ ಸಾರ್ವಜನಿಕ ಆವಾಸಸ್ಥಾನದಲ್ಲಿ ಚೆನ್ನಾಗಿವೆ. ಪ್ರತ್ಯೇಕ ಆವರಣದಲ್ಲಿ ಮೊಟ್ಟೆಯೊಡೆದ ಮರಿ ಆರೋಗ್ಯವಾಗಿರುವಂತೆ ನೋಡಿಕೊಳ್ಳಲಾಗುತ್ತಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.