Mangaluru: ಧರ್ಮಸ್ಥಳದ ಸ್ನಾನ ಘಟ್ಟದಲ್ಲಿ ನೀರಿನ ಹರಿವು ಹೆಚ್ಚಳ: ನೇತ್ರಾವತಿ ನದಿಗೆ ಇಳಿಯದಂತೆ ಯಾತ್ರಿಕರಿಗೆ ಸೂಚನೆ

Mangaluru: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ ನದಿ ತುಂಬಿಕೊಂಡು ಹರಿಯುತ್ತಿದೆ. ಹೀಗಾಗಿ ಯಾತ್ರಿಕರು ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಸ್ನಾನ ಘಟ್ಟದಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಧರ್ಮಸ್ಥಳಕ್ಕೆ ಬರುವ ಭಕ್ತರು, ಯಾತ್ರಾರ್ಥಿಗಳು ಸ್ನಾನಕ್ಕೆಂದು ನದಿಗೆ ಇಳಿಯದಂತೆ ದೇವಸ್ಥಾನದ ಆಡಳಿತ ಮಂಡಳಿ, ಸ್ಥಳಿಯ ಆಡಳಿತ ಸೂಚನೆ ನೀಡಿದೆ.
Comments are closed.