Talli Vandanam : ರಾಜ್ಯದ ಹೊಸ ಯೋಜನೆ, ಶಾಲೆಗೆ ಹೋಗುವ ಪ್ರತಿ ಹುಡುಗಿಗೂ ಸಿಗುತ್ತೆ 15,000 ರೂ. ಕ್ಯಾಷ್!

Share the Article

Hyderabad: ಹೊಸ ಯೋಜನೆ ಬಂದಿದೆ. ಅದರ ಹೆಸರು ಚೆನ್ನಾಗಿದೆ. ತಲ್ಲಿಕಿ ವಂದನಂ ಅಂತ ಈ ಯೋಜನೆಯ ಹೆಸರು. ಯಾವುದೋ ತೆಲುಗು ಜನಪ್ರಿಯ ಸಿನಿಮಾ ಹಾಡಿನ ತುಣುಕೊಂದರ ತರ ಕೇಳಿಸುತ್ತೆ ಈ ಹೆಸರು. ನಿಜಕ್ಕೂ ಇದು ತೆಲುಗು ಹೆಸರೇ!

ಆ ಯೋಜನೆಯ ಅಡಿಯಲ್ಲಿ ಹೆಣ್ಮಕ್ಕಳು ಶಾಲೆಗೆ ಹೋಗುತ್ತಿದ್ದರೆ, ವರ್ಷಕ್ಕೆ 15,000 ರೂಪಾಯಿ ಕೊಡುತ್ತಾರೆ. ಆ ಯೋಜನೆ ಇದೀಗ ಒಂದು ಕುಟುಂಬಕ್ಕೆ ವರದಾನವಾಗಿದ್ದು, ಆಲ್ಲಿ ಒಂದೇ ಕುಟುಂಬ ಸರ್ಕಾರದಿಂದ 60 ಸಾವಿರ ಪಡೆಯುತ್ತಿದೆ. ಯಾಕೆಂದರೆ ಆ ಮನೆಯಲ್ಲಿ 4 ಜನ ಮನೆ ಬೆಳಗಬಲ್ಲ ಭಾಗ್ಯಲಕ್ಷ್ಮಿಯರಿದ್ದಾರೆ!

ಹೌದು, ದಕ್ಷಿಣ ಭಾರತದಲ್ಲಿ ಜನಸಂಖ್ಯೆ ಹೆಚ್ಚಾಗಬೇಕು ಅನ್ನೋದು ಆಂಧ್ರ ಸಿಎಂ ನಾಯ್ಡುಗಾರು ಅವರ ಆಸೆ. ಅದೇ ಕಾರಣಕ್ಕಾಗಿ ಆಂಧ್ರಪ್ರದೇಶ ಸರ್ಕಾರದ ತಲ್ಲಿಕಿ ವಂದನಂ, ಅಂದ್ರೆ ತಾಯಿಗೆ ವಂದನೆ ಅನ್ನೋ ಯೋಜನೆಯನ್ನು ಜಾರಿ ಮಾಡಿದೆ. ಶಾಲೆಗೆ ಹೋಗುವ ಪ್ರತಿ ಮನೆಯ ಹೆಣ್ಣು ಮಕ್ಕಳಿಗೆ ಈ ಯೋಜನೆ ಅಡಿ ವರ್ಷಕ್ಕೆ ₹15 ಸಾವಿರ ರೂಪಾಯಿ ನೆಟ್ ಕ್ಯಾಷ್ ಕೊಡಲಾಗುತ್ತದೆ.

ಒಂದೇ ಮನೆಯಲ್ಲಿ 2 ಅಥವಾ ಅದಕ್ಕೂ ಹೆಚ್ಚು ಮಕ್ಕಳಿದ್ದರೆ ಒಂದೇ ಮಗುವಿಗೆ ಸೌಲಭ್ಯ ನೀಡುವುದು ಸರಿಯಲ್ಲ. ಹೀಗಾಗಿ ಕುಟುಂಬದ ಎಲ್ಲ ಮಕ್ಕಳಿಗೂ ಈ ಯೋಜನೆಯ ಸೌಲಭ್ಯ ಸಿಗಲಿದ್ದು, 67 ಲಕ್ಷಕ್ಕೂ ಹೆಚ್ಚು ಜನರು ಇದರ ಲಾಭ ಪಡೆಯಲಿದ್ದಾರೆ ಎಂದು ಅವರು ಘೋಷಿಸಿದ್ದಾರೆ.

12 ಮಕ್ಕಳು, ಒಂದೇ ಕುಟುಂಬಕ್ಕೆ 60 ಸಾವಿರ!

ತಲ್ಲಿಕಿ ವಂದನಂ ಯೋಜನೆ ಬಂದ ಬೆನ್ನಲ್ಲೇ ಅಲ್ಲಿನ ಒಂದು ಕುಟುಂಬ ದೊಡ್ಡದಾಗಿ ವೈರಲ್ ಆಗುತ್ತಿದೆ. ಅಲ್ಲಿನ ಓರ್ವ ತಲ್ಲಿ ಮುಸ್ಲಿಂ ಮಹಿಳೆಗೆ ಬರೋಬ್ಬರಿ 12 ಹೆಣ್ಣು ಮಕ್ಕಳಿದ್ದಾರೆ. ಆ ಎಲ್ಲಾ ಮಕ್ಕಳಿಗೆ ವರ್ಷಕ್ಕೆ 15 ಸಾವಿರ ಸಿಕ್ಕರೆ, ಅದೊಂದೇ ಕುಟುಂಬಕ್ಕೆ ವರ್ಷಕ್ಕೆ ಭರ್ತಿ 60,000 ಸಿಗಲಿದೆ. ಈ ಬಗ್ಗೆ ಖುಷಿ ಹಂಚಿಕೊಂಡ ಮಹಿಳೆ, “ಸಲಾಂ ಅಲೈಕುಮ್ ತಲ್ಲಿ ವಂದನಂನಿಂದ ಲಾಭವಾಗುತ್ತಿದೆ. 4 ಹೆಣ್ಮಕ್ಕಳು ಸೇರಿ ನನಗೆ ಒಟ್ಟು 12 ಮಕ್ಕಳಿದ್ದಾರೆ. ಎಲ್ಲಾ 4 ಹೆಣ್ಮಕ್ಕಳೂ ಶಾಲೆಗೆ ಹೋಗುತ್ತಿದ್ದಾರೆ. ಮನೆಯಲ್ಲಿ ಎಲ್ಲಾ 12 ಮಕ್ಕಳೂ ಓದುತ್ತಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ವಂದನo (ಧನ್ಯವಾದ) ಎಂದು 12 ಮಕ್ಕಳ ದೊಡ್ಡ ಕುಟುಂಬ ಬೆಳೆಸುತ್ತಿರುವ ತಾಯಿ ಹೇಳಿದ್ದಾರೆ.

Comments are closed.