Udupi: ಮನೆಗೆ ನುಗ್ಗಿ ಮನೆಯಲ್ಲಿ ಮಲಗಿದ್ದವರ ಮೇಲೆ ಕತ್ತಿಯಿಂದ ಹಲ್ಲೆ: ಆರೋಪಿ ಪೊಲೀಸ್ ವಶಕ್ಕೆ

Share the Article

Udupi: ಉಡುಪಿಯಲ್ಲಿ ದುಷ್ಕರ್ಮಿ ಒಬ್ಬ ತಂದೆ ಮತ್ತು ಅಪ್ರಾಪ್ತ ಮಗಳು ಮಲಗಿದ್ದಂತಹ ಮನೆಗೆ ನುಗ್ಗಿ ತಂದೆಯನ್ನು ತೀವ್ರವಾಗಿ ಕತ್ತಿಯಿಂದ ಹಲ್ಲೆ ನಡೆಸಿದಂತಹ ಘಟನೆ ನಡೆದಿದೆ.

ಕೂಲಿ ಕಾರ್ಮಿಕರ ಕರಬಸಪ್ಪ(43) ಹಲ್ಲೆಗೊಳಗಾದ ವ್ಯಕ್ತಿ. ಕಾರ್ಮಿಕ ಕುಮಾರ್ ಹಲ್ಲೆ ನಡೆಸಿದ ದುಷ್ಕರ್ಮಿ. ತಂದೆ ಮಗಳು ಮಲಗಿರುವ ಸಮಯ ನಡುರಾತ್ರಿ ಕತ್ತಿ ಹಿಡಿದು ಬಂದ ಕುಮಾರ್ ಮಲಗಿದಲ್ಲಿಯೇ ಹಲ್ಲೆ ನಡೆಸಿದ್ದಾನೆ. ಎಚ್ಚರಗೊಂಡ ಮಗಳು ಬೊಬ್ಬೆ ಹಾಕಿದ್ದು ಸ್ಥಳೀಯರು ಆಗಮಿಸಿ ವಿಶು ಶೆಟ್ಟಿ ಯವರಿಗೆ ಮಾಹಿತಿ ನೀಡಿದ್ದಾರೆ.

ಹಲ್ಲೆ ಗೊಳಗಾದವರನ್ನು ವಿಶು ಶೇಟ್ಟಿ ಅಂಬಲಪಾಡಿ ಎಂಬುವರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಬಳಿ ಇದ್ದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ.

Comments are closed.