Scam Alert: ನಕಲಿ ಸಾಲದ ಅಪ್ಲಿಕೇಶನ್‌ಗಳ ಪಟ್ಟಿ ಹಂಚಿಕೊಂಡ ಸರ್ಕಾರ – ಮೊಬೈಲ್‌ ಫೋನ್‌ಗಳಿಂದ ತೆಗೆದುಹಾಕಲು ಸೂಚನೆ

Share the Article

Scam Alert: ಸರ್ಕಾರಿ ಸಂಸ್ಥೆ ‘ಸೈಬರ್ ದೋಸ್ತ್’ ಗೂಗಲ್ ಪ್ಲೇ ಸ್ಟೋರ್‌ನಲ್ಲಿನ 10 ನಕಲಿ ಸಾಲದ ಅಪ್ಲಿಕೇಶನ್‌ಗಳ ಪಟ್ಟಿ ಬಿಡುಗಡೆ ಮಾಡಿದ್ದು, ಮೊಬೈಲ್ ಫೋನ್‌ಗಳಿಂದ ಈ ಆ್ಯಪ್‌ಗಳನ್ನು ತೆಗೆದುಹಾಕಲು ಸೂಚಿಸಿದೆ. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಕದಿಯಲು ಈ ಅಪ್ಲಿಕೇಶನ್‌ಗಳನ್ನು ಬಳಸಲಾಗುತ್ತದೆ. ಪಟ್ಟಿಯಲ್ಲಿ Invoicer Experts, Loan Raina-Instant Loan Online, LoanQ, GranetSwift, CreditEdge, Ultimate Lend, SmartRich Pro, CreditLens ಅಪ್ಲಿಕೇಶನ್‌ಗಳು ಸೇರಿವೆ.

‘ಡೌನ್‌ಲೋಡ್’ ಟ್ಯಾಪ್ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಕೆಲವು ಅಪ್ಲಿಕೇಶನ್‌ಗಳು ನಕಲಿ ಮಾತ್ರವಲ್ಲ – ಅವು ನಿಮ್ಮ ಡೇಟಾ, ಹಣ ಮತ್ತು ಗೌಪ್ಯತೆಗೆ ಬೆದರಿಕೆಯಾಗಿವೆ. ಇವುಗಳಲ್ಲಿ ಹಲವು ಅಪ್ಲಿಕೇಶನ್‌ಗಳು ವಿದೇಶಿ ಸಂಸ್ಥೆಗಳಿಂದ ಬಂದವು ಎಂದು ಪತ್ತೆಹಚ್ಚಲಾಗಿದೆ.

1. ಅಪ್ಲಿಕೇಶನ್‌ನ ದೃಢೀಕರಣವನ್ನು ಪರಿಶೀಲಿಸಿ
2. ಆರ್‌ಬಿಐ-ಪರಿಶೀಲಿಸಿದ ಸಾಲ ವೇದಿಕೆಗಳನ್ನು ಆರಿಸಿಕೊಳ್ಳಿ
3. ಯಾವುದೇ ವಿವರಗಳನ್ನು ಹಂಚಿಕೊಳ್ಳುವ ಮೊದಲು ಒಂದಷ್ಟು ಸಂಶೋಧನೆ ಮಾಡಿ
4. ಒಂದು ವೇಳೆ ನೀವು ಅಂಥ ಅಪ್ಲಿಕೇಶನ್‌ಗಳನ್ನು ಗುರುತಿಸಿದರೆ ಅದನ್ನುಸೈಬರ್‌ ಅವರಿಗೆ ವರದಿ ಮಾಡಿ.

Comments are closed.