UPI: ಇಂದಿನಿಂದ ಫೋನ್‌ಪೇ, ಗೂಗಲ್ ಪೇ, ಪೇಟಿಎಂ ವಹಿವಾಟುಗಳು ಮತ್ತಷ್ಟು ತ್ವರಿತ: ಎಷ್ಟು ಬಾರಿ ಬ್ಯಾಲೆನ್ಸ್ ಚೆಕ್ ಮಾಡಬಹುದು?

Share the Article

UPI: ಏಕೀಕೃತ ಪಾವತಿ ಇಂಟರ್‌ಫೇಸ್ (UPI) ಭಾರತದಲ್ಲಿ ಡಿಜಿಟಲ್ ವಹಿವಾಟುಗಳನ್ನು ವೇಗ ಮತ್ತು ಹೆಚ್ಚು ಅನುಕೂಲಕರವಾಗಿಸಿದ್ದು, ಬಳಕೆದಾರರಿಗೆ ಇಂದಿನಿಂದ (ಜೂನ್ 16) ಈ ಸೌಲಭ್ಯ ದೊರೆಯಲಿದೆ. ‘ವಹಿವಾಟಿನ ಸ್ಥಿತಿ ಪರಿಶೀಲನೆ’, ‘ವಹಿವಾಟು ರದ್ದತಿ’ಯ ಪ್ರತಿಕ್ರಿಯೆ ಸಮಯ 30 ಸೆಕೆಂಡ್‌ಗಳಿಂದ 10 ಸೆಕೆಂಡ್‌ಗಳಿಗೆ ಇಳಿಸಲಾಗಿದೆ. ‘ವಿಳಾಸ ಪರಿಶೀಲನೆ’ಯ ಪ್ರತಿಕ್ರಿಯೆ ಸಮಯ 15 ಸೆಕೆಂಡ್‌ಗಳಿಂದ 10 ಸೆಕೆಂಡ್‌ಗಳಿಗೆ ಇಳಿಸಲಾಗಿದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂನಲ್ಲಿ ಈ ವೇಗ ಪರಿಷ್ಕರಣೆ ಕಂಡುಬರಲಿದೆ.

ಈ ಹಿಂದೆ ಅಂದರೆ 2025ರ ಏಪ್ರಿಲ್ 26 ರಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ಆನ್ಲೈನ್ ಹಣ ಪಾವತಿ ಇನ್ನಷ್ಟು ವೇಗದಲ್ಲಿ ಕೆಲಸ ಮಾಡಲಿವೆ ಎಂದು ಹೇಳಿತ್ತು.

ಹಾಗಾಗಿ ಇಂದಿನಿಂದ ಆನ್ಲೈನ್ ಪೇಮೆಂಟ್ಸ್ನಲ್ಲಿ ವೇಗ ಹೆಚ್ಚಾಗಲಿದ್ದು ಬ್ಯಾಂಕುಗಳು, ಫಲಾನುಭವಿ ಬ್ಯಾಂಕುಗಳು ಇದರ ಲಾಭ ಪಡೆದುಕೊಳ್ಳಲಿವೆ. ಹಾಗೆ ಜನಪ್ರಿಯ ಪೇಮೆಂಟ್ಸ್ ಆ್ಯಪ್ಗಳು ಆಗಿರುವ ಫೋನ್ ಪೇ, ಗೂಗಲ್ ಪೇ ಪೇಟಿಎಂ ಈ ಪ್ರಯೋಜನ ಪಡೆದುಕೊಳ್ಳಲಿವೆ. ಇಂದಿನ ಹೊಸ ಮಾರ್ಗಸೂಚಿಗಳು ಅನೇಕ ಮುಖ್ಯ ಬದಲಾವಣೆಗಳನ್ನು ತರುರಲಿದೆ.

ಏನೆಲ್ಲಾ ಬದಲಾವಣೆ ಇರಲಿದೆ?

• ಇನ್ನು ಮುಂದೆ ದಿನಕ್ಕೆ ಯುಪಿಐ ಆ್ಯಪ್ಗಳಲ್ಲಿ 50 ಸಲ ಬ್ಯಾಲೆನ್ಸ್ ಚೆಕ್ ಮಾಡಬಹುದು

• ನಿಮ್ಮ ನಿಮ್ಮ ಫೋನ್ ನಂಬರ್ಗೆ ಲಿಂಕ್ ಆಗಿರುವ ಎಲ್ಲ ಅಕೌಂಟ್ಗಳನ್ನು ನೋಡಬಹುದು

• ಜೊತೆಗೆ ಪ್ರತಿ ಬಳಕೆದಾರರು ದಿನಕ್ಕೆ ಪ್ರತಿ ಅಪ್ಲಿಕೇಶನ್‌ಗೆ 25 ಬಾರಿ ವಿನಂತಿ (Requests)ಗಳನ್ನು ಪಡೆಯಬಹುದು.

• ಸ್ವಯಂಚಾಲಿತ ಪಾವತಿ ಆದೇಶ ಕಾರ್ಯಗತಗೊಳಿಸುವಿಕೆ-

1. ಆಟೋ ಪೇಗೆ 1ರ ಬದಲಾಗಿ 3 ಮರುಪ್ರಯತ್ನ (retries)ಗಳಿಗೆ ಅನುಮತಿ

2. ಸಿಸ್ಟಮ್ ಓವರ್‌ಲೋಡ್ ತಪ್ಪಿಸಲು ಈ ಪ್ರಯತ್ನಗಳನ್ನು ಪೀಕ್ ಹವರ್‌ನ ಹೊರಗೆ ನೀಡಲಾಗುತ್ತೆ.

3. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಮತ್ತು ಸಂಜೆ 5 ರಿಂದ ರಾತ್ರಿ 9:30 ರವರೆಗೆ ಪೀಕ್ ಹವರ್ ಎಂದು ಗುರುತಿಸಲಾಗಿದೆ.

Comments are closed.