Airl lines : ಹಜ್ ಯಾತ್ರಿಕರಿದ್ದ ಸೌಧಿ ಏರ್‌ಲೈನ್ಸ್‌ ವಿಮಾನದಲ್ಲಿ ಬೆಂಕಿ – ಲ್ಯಾಂಡಿಂಗ್ ವೇಳೆ ಘಟನೆ, ತಪ್ಪಿದ ಅನಾಹುತ!!

Share the Article

Airlines : ಅಹಮದಾಬಾದ್ ವಿಮಾನ ದುರಂತದ ಬೆನ್ನೆಲ್ಲೇ ವಿಮಾನಗಳಲ್ಲಿ ಒಂದಲ್ಲ ಒಂದು ಲೋಪದೋಷಗಳು ಕಂಡುಬರುತ್ತವೆ. ಇದೀಗ ಹಜ್‌ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಸೌದಿಯಾ ಏರ್‌ಲೈನ್ಸ್‌ (Saudia Airlines) ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ಲಕ್ನೋ ವಿಮಾನ ನಿಲ್ದಾಣದಲ್ಲಿ (Lucknow Airport) ತುರ್ತು ಭೂಸ್ಪರ್ಶ ಮಾಡಿದೆ.

ಹೌದು, SV3112 ಸಂಖ್ಯೆಯ ವಿಮಾನ ಶನಿವಾರ ರಾತ್ರಿ 10:45ಕ್ಕೆ ಜೆಡ್ಡಾದಿಂದ 250 ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿತ್ತು, ಸಿಬ್ಬಂದಿಗಳೂ ಇದ್ದರು. ಹಜ್‌ಗೆ ಹೊರಟಿದ್ದ ವೇಳೆ ಬೆಳಗ್ಗೆ 6:30ರ ಸುಮಾರಿಗೆ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು ತುರ್ತು ಭೂಸ್ಪರ್ಶ ಮಾಡಿದೆ.

ತಾಂತ್ರಿಕ ದೋಷ ಉಂಟಾದ ಕೆಲವೇ ಕ್ಷಣಗಳಲ್ಲಿ ಪೈಲಟ್‌ ವಿಮಾನವನ್ನು ತುರ್ತು ಲ್ಯಾಂಡಿಂಗ್‌ ಮಾಡಿದ್ದರು. ವಿಮಾನ ಚಕ್ರಗಳು ರನ್‌ವೇಗೆ (Runway) ಇಳಿಯುತ್ತಿದ್ದಂತೆ ಟೈಯರ್‌ನಿಂದ ಬೆಂಕಿ ಕಿಡಿಗಳು ಚಿಮ್ಮಿದ್ದು, ದಟ್ಟ ಹೊಗೆ ಹೊಮ್ಮಿದೆ. ಈ ವೇಳೆ ವಿಮಾನ ನಿಲ್ದಾಣದ ಅಗ್ನಿಶಾಮಕ ಮತ್ತು ರಕ್ಷಣಾ ತಂಡವು ತಕ್ಷಣವೇ ನೆರವಿಗೆ ಧಾವಿಸಿ ಕೇವಲ 20 ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿತು. ಅದೃಷ್ಟವಶಾತ್‌ ಯಾವುದೇ ದುರಂತ ಸಂಭವಿಸದೇ ನೂರಾರು ಯಾತ್ರಿಕರು, ವಿಮಾನ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋ ಕೂಡ ವೈರಲ್‌ ಆಗಿದೆ.

Comments are closed.