Belthangady: ವೇಶ್ಯಾವಾಟಿಕೆ ಶಂಕೆ, ಪೊಲೀಸರಿಂದ ಲಾಡ್ಜ್‌ಗಳಿಗೆ ದಾಳಿ

Belthangady: ಬೆಳ್ತಂಗಡಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ ನೇತೃತ್ವದಲ್ಲಿ ಬೆಳ್ತಂಗಡಿ ಮತ್ತು ಉಜಿರೆಯಲ್ಲಿರುವ ಲಾಡ್ಜ್‌ಗಳ ಮೇಲೆ ಜೂ.14 ರಂದು ರಾತ್ರಿ ದಾಳಿ ಮಾಡಿ ಪರಿಶೀಲನೆ ಮಾಡಿದ ಘಟನೆ ನಡೆದಿರುವ ಕುರಿತು ವರದಿಯಾಗಿದೆ.

ಉಜಿರೆಯ ಒಂದು ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸಲು ಯುವತಿಯನ್ನು ಕರೆತರಲಾಗಿದೆ ಎನ್ನಲಾಗಿದೆ. ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಈ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆಗೆ ಕರೆಸಿದ್ದ ಓರ್ವ ಯುವತಿಯ ರಕ್ಷಣೆ ಮಾಡಲಾಗಿದೆ. ಲಾಡ್ಜ್‌ನ ಮ್ಯಾನೇಜರ್ ಅವರನ್ನು ಬಂಧನ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಘಟನೆ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಲಾಡ್ಜ್ ಮಾಲೀಕ ಉಜಿರೆಯ ರಮೇಶ್ ಶೆಟ್ಟಿ, ಮ್ಯಾನೇಜರ್ ಸತೀಶ್ ಪೂಜಾರಿ, ಸಿಬ್ಬಂದಿ ಯೋಗೀಶ್ ಆಚಾರ್ಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.
ಪ್ರತಿ ವಾರ ಬೆಳ್ತಂಗಡಿ ಪೊಲೀಸರು ಲಾಡ್ಜ್‌ಗಳಿಗೆ ತೆರಳಿ ಲಾಡ್ಜ್ ಲೆಡ್ಜರ್ ಪುಸ್ತಕ ಪರಿಶೀಲನೆ ಮಾಡುತ್ತಿದ್ದು ಹೊಸ ಎಸ್ಪಿ ಬಂದ ನಂತರ ಎಲ್ಲಾ ಲಾಡ್ಜ್ ಮಾಲೀಕರನ್ನು ಠಾಣೆಗೆ ಕರೆಸಿ ಸಿಸಿ ಕ್ಯಾಮೆರಾ, ಲೆಡ್ಜರ್ ಪುಸ್ತಕ, ಲಾಡ್ಜ್‌ಗೆ ಬರುವ ಗ್ರಾಹಕರ ಐಡಿ ಕಾರ್ಡ್ ಸರಿಯಾಗಿ ನೋಡಲು ವಾರ್ನಿಂಗ್ ನೀಡಿದ್ದರು.
ಬೆಳ್ತಂಗಡಿ ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಸಬ್ ಇನ್ಸ್‌ಪೆಕ್ಟರ್ ಮುರಳೀಧರ್ ನಾಯ್ಕ್, ಸಬ್‌ಇನ್ಸ್‌ಪೆಕ್ಟರ್ ಯಲ್ಲಪ್ಪ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಮಾಡಿದರು.
Comments are closed.