Indian PM Visit To Croatia: ಜಿ7 ಶೃಂಗಸಭೆ, ಸೈಪ್ರಸ್‌ಗೆ ಹೊರಟ ಪ್ರಧಾನಿ ಮೋದಿ

Indian PM Visit To Croatia: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಜೂನ್ 16 ರಂದು ಐದು ದಿನಗಳ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಈ ಪ್ರವಾಸವು ಸೈಪ್ರಸ್, ಕೆನಡಾ ಮತ್ತು ಕ್ರೊಯೇಷಿಯಾವನ್ನು ಒಳಗೊಂಡಿದೆ. ಆಪರೇಷನ್ ಸಿಂಧೂರ್ ಮತ್ತು ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಂತರ ಇದು ಅವರ ಮೊದಲ ಅಂತರರಾಷ್ಟ್ರೀಯ ಭೇಟಿಯಾಗಿದ್ದು, ರಾಜತಾಂತ್ರಿಕ ದೃಷ್ಟಿಕೋನದಿಂದ ಇದು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ.

ಪ್ರಧಾನಿ ಮೋದಿ ಅವರು ಸೈಪ್ರಸ್‌ನಿಂದ ಪ್ರವಾಸ ಆರಂಭಿಸಲಿದ್ದಾರೆ. ಅವರು ಜೂನ್ 15-16 ರವರೆಗೆ ಅಲ್ಲಿಯೇ ಇರಲಿದ್ದಾರೆ. ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರ ಆಹ್ವಾನದ ಮೇರೆಗೆ ಈ ಪ್ರವಾಸ ನಡೆಯುತ್ತಿದೆ. ಎರಡು ದಶಕಗಳಲ್ಲಿ ಯಾವುದೇ ಭಾರತೀಯ ಪ್ರಧಾನಿ ಸೈಪ್ರಸ್‌ಗೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ ಎಂಬುದು ಗಮನಾರ್ಹ.
ಈ ಸಂದರ್ಭದಲ್ಲಿ, ಎರಡೂ ದೇಶಗಳ ನಡುವೆ ವ್ಯಾಪಾರ, ಹೂಡಿಕೆ, ಭದ್ರತೆ ಮತ್ತು ತಾಂತ್ರಿಕ ಸಹಕಾರವನ್ನು ಬಲಪಡಿಸುವ ಕುರಿತು ಚರ್ಚೆ ನಡೆಯಲಿದೆ.
Comments are closed.