Madenuru Manu: ‘ಶಿವಣ್ಣ- ದರ್ಶನ್ ಬಳಿ ಕ್ಷಮೆ ಕೇಳು, ನನ್ನ ಬಗ್ಗೆ ಯೋಚಿಸಬೇಡ’ !! ಮಡೆನೂರು ಮನುಗೆ ದ್ರುವ ಸರ್ಜಾ ಕಿವಿಮಾತು

Share the Article

Madenuru Manu: ಮಡೆನೂರು ಮನು ಅವರ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದ ಕಾರಣ ಅವರನ್ನು ಬಂಧಿಸಿ ಜೈಲಿಗೆ ಹಾಕಲಾಯಿತು. ಇದೀಗ ಅವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಈ ಮೊದಲು ಅವರು ಸ್ಟಾರ್ ಹೀರೋಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಆಡಿಯೋನ ಈ ಸಂದರ್ಭದಲ್ಲಿ ವೈರಲ್ ಮಾಡಲಾಗಿತ್ತು. ಆರಂಭದಲ್ಲಿ ಇದು ನನ್ನ ಆಡಿಯೋ ಅಲ್ಲ ಎಂದು ವಾದಿಸುತ್ತಿದ್ದ ಮನು ಅವರು ಈಗ ಮನು ಅದು ತಮ್ಮದೇ ಆಡಿಯೋ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಧ್ರುವ ಸರ್ಜಾಗೆ ಕ್ಷಮೆ ಕೇಳಿದ್ದಾರೆ.

ಹೌದು, ಧ್ರುವ ಸರ್ಜಾ ಜೊತೆ ವಾಟ್ಸಾಪ್​​ನಲ್ಲಿ ಮಡೆನೂರು ಮನು ಚಾಟ್ ಮಾಡಿದ್ದಾರೆ ಎನ್ನಲಾಗಿದ್ದು, ಈ ವೇಳೆ ಧ್ರುವ ಅವರಿಗೆ ಆಡಿಯೋ ಸಂದೇಶ ಕಳುಹಿಸಿದ್ದಾರೆ. ‘ನನ್ನ ಕರಿಯರ್ ಮೇಲೆ ಆಣೆ ಮಾಡಿ ಹೇಳುತ್ತೇನೆ. ಉದ್ದೇಶ ಪೂರ್ವಕವಾಗಿ ನಾನು ಹಾಗೆ ಮಾತನಾಡಿಲ್ಲ. ನನ್ನಿಂದ ತಪ್ಪು ಮಾಡಿಸಿದ್ದಾರೆ. ಒಳ್ಳೆಯ ಸಿನಿಮಾನ ಕೊಂದುಬಿಟ್ಟರು. ಕಲೆ ನಂಬಿ ಬಂದಿದ್ದೇನೆ. ಇಂಡಸ್ಟ್ರಿಯಿಂದ ಬ್ಯಾನ್ ಎಂದು ಹೇಳುತ್ತಿದ್ದಾರೆ. ಒಂದು ಅವಕಾಶ ಕೊಡಿ ಧ್ರುವ ಅಣ್ಣ’ ಎಂದು ಮಡೆನೂರು ಮನು ಕೋರಿದ್ದಾರೆ.

ಅಲ್ಲದೆ ‘ನಾನು ಬದಲಾಗ್ತೀನಿ. ಬದಲಾಗಲು ಅವಕಾಶ ಮಾಡಿಕೊಡಿ. ಜೈಲಿನಿಂದ ಹೊರ ಬಂದ ಬಳಿಕ ಖಿನ್ನೆತೆಗೆ ಒಳಗಾಗಿದ್ದೆ. ನೀವು ಎಲ್ಲಿ ಸಿಕ್ಕರೂ ಬಂದು ಕ್ಷಮೆ ಕೇಳುತ್ತೇನೆ. ಆಶೀರ್ವಾದ ಪಡೆದುಕೊಳ್ಳುತ್ತೇನೆ’ ಎಂದು ಕೂಡ ಮಡೆನೂರು ಮನು ಹೇಳಿದ್ದಾರೆ ಎನ್ನಲಾಗಿದೆ.

ಮನು ಕಳುಹಿಸಿರುವ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿರುವ ಧ್ರುವ ಸರ್ಜಾ, ‘ನನ್ನ ಬಗ್ಗೆ ಯೋಚನೆ ಮಾಡಬೇಡಿ. ನಿಮ್ಮ ತಾಯಿ, ಹೆಂಡತಿ ಮತ್ತು ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ. ಶಿವಣ್ಣ, ದರ್ಶನ್‌ ಜತೆ ಮಾತನಾಡಿ, ಅವರು ನಮ್ಮ ಹಿರಿಯರು’ ಎಂದು ಮನುಗೆ ಸಲಹೆ ನೀಡಿದ್ದಾರೆ.

Comments are closed.