Coconut Rate: ಮತ್ತೊಂದು ದಾಖಲೆ ಬರೆದ ಉಂಡೆ ಕೊಬ್ಬರಿ – ಕ್ವಿಂಟಲ್ ಕೊಬ್ಬರಿ ₹24 ಸಾವಿರ

Coconut Rate: ಒಂದು ಕಾಲದಲ್ಲಿ ಯಾರಿಗೂ ಬೇಡವಾಗಿದ್ದ ತೆಂಗು ಇದೀಗ ಬಂಪರ್ ಬೆಲೆ ಬಂದು ಕೊಂಡುಕೊಳ್ಳಲು ಅಸಾಧ್ಯವೆನ್ನುವ ಮಟ್ಟಕ್ಕೆ ಬೆಲೆ ಏರಿಕೆಯಾಗಿದೆ. ಅತ್ತ ರೈತರು ತೆಂಗಿನಿಂದ ಯಾವುದೇ ಪ್ರಯೋಜನ ಇಲ್ಲವೆಂದು ಅಡಿಕೆ ಕಡೆ ಮುಖ ಮಾಡಿದ್ರು. ಆದರೆ ಇದೀಗ ಉಂಡೆ ಕೊಬ್ಬರಿ ಬೆಲೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ತಿಪಟೂರು, ಅರಸೀಕೆರೆ ಸೇರಿದಂತೆ ತೆಂಗು ಬೆಳೆಯುವ ಕಡೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಉಂಡೆ ಕೊಬ್ಬರಿ ಬೆಲೆಯು ಕ್ವಿಂಟಲ್ ₹24 ಸಾವಿರದ ಗಡಿ ದಾಟುವ ಮೂಲಕ ಮತ್ತೊಂದು ದಾಖಲೆ ಬರೆದಿದೆ.
ಜೂನ್ 9ರಂದು ಕ್ವಿಂಟಲ್‌ಗೆ ಗರಿಷ್ಠ ₹22,356, ಕನಿಷ್ಠ ₹20,000, ಮಾದರಿ ₹21,500ಕ್ಕೆ ಉಂಡೆ ಕೊಬ್ಬರಿ . 2,887 (6,714 ಚೀಲ) ಆವಕವಾಗಿತ್ತು. ಅಲ್ಲದೆ ಅರಸೀಕೆರೆ ಎಪಿಎಂಸಿ ಮಾರುಕಟ್ಟೆಯಲ್ಲಿ 23000ಕ್ಕೆ ಏರಿಕೆಯಾಗಿತ್ತು. ಹಾಗೆ ತಿಪಟೂರು ಮಾರುಕಟ್ಟೆಯಲ್ಲಿ ಬರೋಬ್ಬರಿ 3000ಕ್ಕೂ ಅಧಿಕ ಉಂಡೆ ಕೊಬ್ಬರಿ ಅವಕವಾಗಿದ್ದು, ದಿನದಂತ್ಯಕ್ಕೆ 21 ಸಾವಿಉರದಿಂದ 23, 850 ರೂಪಾಯಿವರೆಗೂ ಮಾರಟವಾಗಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಆರಂಭವಾದ ಬೆಲೆ ಏರಿಕೆ ನಂತರದ ದಿನಗಳಲ್ಲೂ ಅದೇ ಲಯವನ್ನು ಕಾಯ್ದುಕೊಂಡಿದೆ. ಮಾರ್ಚ್ ಅಂತ್ಯದಲ್ಲಿ ಕ್ವಿಂಟಲ್ ₹19 ಸಾವಿರಕ್ಕೆ ಹೆಚ್ಚಳ ಆಗಿತ್ತು. ಕೆಲವು ದಿನಗಳ ಕಾಲ ಅದೇ ಮಟ್ಟವನ್ನು ಕಾಯ್ದುಕೊಂಡು, ಮೇ 26ರಂದು ₹20,900ಕ್ಕೆ ಏರಿಕೆಯಾಗಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಮೇ ಅಂತ್ಯಕ್ಕೆ ₹21,809ಕ್ಕೆ ತಲುಪಿತ್ತು. ಈಗ ಬೆಲೆಯು ಕ್ವಿಂಟಲ್‌ಗೆ ₹24 ಸಾವಿರ ದಾಟಿದೆ.
ಈ ಸಮಯದಲ್ಲಿ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬರಿ ಬರಬೇಕಿತ್ತು. ಆವಕದಲ್ಲಿ ಏರಿಕೆ ಆಗದಿರುವುದು, ಬೇಡಿಕೆ ಹೆಚ್ಚುತ್ತಿರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಧಾರಣೆ ಮತ್ತೂ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಎಳನೀರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿದ್ದು, ಕಾಯಿಯನ್ನು ಕೊಬ್ಬರಿಯಾಗಿ ಮಾಡಿ ದಾಸ್ತಾನು ಮಾಡುವುದು ಕಡಿಮೆಯಾಗುತ್ತಿದೆ. ಅಲ್ಲದೆ ಅಡಿಕೆ ರೇಟ್ ಏರುತ್ತಿರುವ ಹಿನ್ನೆಲೆ, ತೆಂಗಿನ ಬೆಳೆಯ ಮೇಲೆ ಉತ್ತೇಜನ ಕಡಿಮೆಯಾಗುತ್ತಿದೆ. ಕಾಯಿ ಕೀಳುವವರ ಅಭಾವ, ಮಂಗಳ ಕಾಟ, ಅಳಿಲಿನ ಕಾಟ, ರೋಗ ಬಾಧೆ ಹಾಗೂ ಇತರ ಕಾರಣಗಳಿಂದ ತೆಂಗಿನ ಬೆಳೆ ಸಂಕಷ್ಟಕ್ಕೆ ಸಿಲುಕಿರುವ ಕಾರಣ ಕೊಬ್ಬರಿ ಇಳುವರಿ ಕಡಿಮೆಯಾಗಿದೆ.
Comments are closed.