Obesity: ಸ್ಥೂಲಕಾಯದಿಂದ ಬೇಸತ್ತಿದ್ದೀರಾ? ವ್ಯಕ್ತಿತ್ವವನ್ನು ಕೆಡಿಸುವುದರ ಜತೆಗೆ ಇತರ ಕಾಯಿಲೆಗಳಿಗೂ ಆಹ್ವಾನ – ಇಲ್ಲಿದೆ ಸೂಕ್ತ ಪರಿಹಾರ

Obesity: ಬೊಜ್ಜಿನಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಸೊಂಟ ನೋವು, ಹೃದ್ರೋಗ, ಮೊಣಕಾಲು ನೋವು ಮುಂತಾದ ಕಾಯಿಲೆಗಳ ಅಪಾಯ ಹೆಚ್ಚಾಗುತ್ತವೆ. ಈ ಕಾರಣದಿಂದಾಗಿ, ಜನರು ಆಹಾರಕ್ರಮಕ್ಕೆ (ಡಯಟ್) ಅನುಸರಿಸುತ್ತಾರೆ ಅಥವಾ ತೂಕವನ್ನು ಕಳೆದುಕೊಳ್ಳಲು ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರು ಸುರಿಸುತ್ತಿದ್ದಾರೆ. ಆದರೂ, ತೂಕ ಕಡಿಮೆಯಾಗುವುದಿಲ್ಲ. ಏಕೆಂದರೆ, ಅವರ ಡಯಟ್ ಚಾರ್ಟ್ ಹಾಗೂ ಚಟುವಟಿಕೆಗಳು ಸಮರ್ಪಕವಾಗಿರುವುದಿಲ್ಲ. ಆಹಾರದ ಬಗ್ಗೆ ಸರಿಯಾದ ಗಮನ ಮತ್ತು ಸ್ವಲ್ಪ ವ್ಯಾಯಾಮದಿಂದ, ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಲು ಸಾಧ್ಯವಿದೆ. ಇಂದುನಿಮ್ಮ ತೂಕವನ್ನು 21 ದಿನಗಳಲ್ಲಿ ಕಳೆದುಕೊಳ್ಳಲು ಪ್ರಾರಂಭಿಸುವ ಅಂತಹ ಕೆಲವು ಸಣ್ಣ ಪರಿಹಾರಗಳನ್ನು ನಾವು ನಿಮಗೆ ಹೇಳುತ್ತಿದ್ದೇವೆ.
1. ಪಪ್ಪಾಯಿಯನ್ನು ನಿಯಮಿತವಾಗಿ ಸೇವಿಸಬೇಕು. ಈ ಹಣ್ಣು ಪ್ರತಿ ಋತುವಿನಲ್ಲಿಯೂ ಸಿಗುತ್ತದೆ. ಪಪ್ಪಾಯಿಯನ್ನು ಸೇವಿಸುವುದರಿಂದ ದೇಹದ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ. ಒಂದು ಕ್ರಿಕೆಟ್ ಚೆಂಡಿನ ಗಾತ್ರದ ಪೇರಲ(ಸೀಬೆ)ವನ್ನು ನಿಯಮಿತವಾಗಿ ಸೇವಿಸಿ. ಪೇರಲವು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ನೀವು ವಾರದಲ್ಲಿ ಆರು ದಿನಗಳವರೆಗೆ ಒಂದೊಂದು ದಿನ ಪರ್ಯಾಯವಾಗಿ ಪಪ್ಪಾಯಿ ಮತ್ತು ಪೇರಲವನ್ನು ತಿನ್ನಬಹುದು. ಸೀಬೆಹಣ್ಣು ಸಿಗದಿದ್ದಾಗ, ನೀವು ಅದೇ ಗಾತ್ರದ ಸೇಬುಗಳನ್ನು ತಿನ್ನಬಹುದು.
2. ತಾಜಾ ತೆಳು ಮಜ್ಜಿಗೆಯನ್ನು ದಿನಕ್ಕೆ ಎರಡು ಬಾರಿ ಕುಡಿಯಿರಿ. ಅರಳಿಯ ತೊಗಟೆಯ ಪುಡಿಯನ್ನು ಹುರಿದು ಮೂರು ಗ್ರಾಂನಷ್ಟು ಪುಡಿಯನ್ನು ಮಜ್ಜಿಗೆಯಲ್ಲಿ ಸೇರಿಸಿ ದಿನವೂ ಸೇವಿಸಿದರೆ ಹೊರಚಾಚಿದ ಹೊಟ್ಟೆ ಕಡಿಮೆಯಾಗುತ್ತದೆ.
3. ಟೀ, ಕಾಫಿ, ಬೇಕರಿ ಉತ್ಪನ್ನಗಳು, ಫಾಸ್ಟ್ ಫುಡ್, ಜಂಕ್ ಫುಡ್, ಸಂಸ್ಕರಿತ ಆಹಾರ, ರಿಫೈನ್ಡ್ ಆಯಿಲ್, ಯಾವುದೇ ಹೊರಗಡೆ ತಯಾರಿಸಿದ ಆಹಾರ, ತಂಪು ಪಾನೀಯಗಳು, ಮದ್ಯಪಾನ ಮಾಡುವುದನ್ನು ನಿಲ್ಲಿಸಿ.
4. ಉಪ್ಪನ್ನು ತುಂಬಾ ಮಿತವಾಗಿ ಬಳಸಬೇಕು. ಸಮುದ್ರದ ಉಪ್ಪಿನ ಬದಲು ಸಂಧವ್ ಉಪ್ಪನ್ನು ಬಳಸಿ. ಉಪ್ಪಿನಕಾಯಿ, ಹಪ್ಪಳ, ಚಿಪ್ಸ್, ಸಂಡಿಗೆ, ಮುಂತಾದ ಉಪ್ಪು ಆಹಾರಗಳನ್ನು ತಪ್ಪಿಸಿ.
5. ಸಮಾನ ಪ್ರಮಾಣದ ಆಮ್ಲಾ ಮತ್ತು ಅರಿಶಿನವನ್ನು ಪುಡಿ ಮಾಡಿ. ಈ ಪುಡಿಯನ್ನು ಮಜ್ಜಿಗೆಯಲ್ಲಿ ತೆಗೆದುಕೊಳ್ಳಿ. ಈ ಪರಿಹಾರದಿಂದ ತೂಕವನ್ನು ತ್ವರಿತವಾಗಿ ಕಡಿಮೆಯಾಗುತ್ತದೆ.
6. ಅಡುಗೆಯಲ್ಲಿ ಹುರಿದ ಸಿದ್ಧ ಮಸಾಲೆಗಳನ್ನು ಬಳಸಬೇಡಿ. ಬದಲಿಗೆ ತಾಜಾ ಕಚ್ಚಾ ಆದರೆ ಬಿಸಿ ಮಾಡಿದ ಮಸಾಲೆಗಳನ್ನು ಬಳಸಬೇಕು, ಇದು ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ನೀಡುತ್ತದೆ.
7. ಆಲೂಗಡ್ಡೆ, ಗೋಧಿ, ಮೈದಾ, ಅಕ್ಕಿ, ಸಕ್ಕರೆ ಮತ್ತು ಇತರ ಸಿಹಿ ಆಹಾರಗಳನ್ನು ತಪ್ಪಿಸಿ. ಬದಲಿಗೆ ಜೋಳ ಮತ್ತು ರಾಗಿಯನ್ನು ಬಳಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬಳಸಿ.
8. ಬೆಳಗಿನ ಉಪಹಾರವನ್ನು ತಪ್ಪಿಸಬಾರದು. ದಿನಕ್ಕೆ ಮೂರು ಬಾರಿ ಮಾತ್ರ ತಿನ್ನಿರಿ. ಮಧ್ಯೆ ತಿನ್ನುತ್ತಾ ಬಾಯಾಡಿಸುತ್ತಾ ಇರಬೇಡಿ.
9. ನಿಮ್ಮ ಒಟ್ಟು ಹಸಿವಿನ 65% ಕ್ಕಿಂತ ಹೆಚ್ಚು ತಿನ್ನಬೇಡಿ. ಈ ಆಹಾರದಲ್ಲಿ ಕನಿಷ್ಠ 40% ಹಸಿ ತರಕಾರಿಗಳು ಸಲಾಡ್ ರೂಪದಲ್ಲಿರಬೇಕು.
10. ವಾರದಲ್ಲಿ ಒಂದು ಅಥವಾ ಎರಡು ಬಾರಿ ನಿರಾಹಾರ ಉಪವಾಸ ಮಾಡಿ. ನೀರನ್ನು ಮಾತ್ರ ಕುಡಿಯಿರಿ.
11. ರಾತ್ರಿ ಊಟವನ್ನು ಸಂಜೆ 7 ಗಂಟೆಗೆ ಮುಂಚೆ ಮಾಡಿ. ತದನಂತರ ನೀರಿನ ಹೊರತು ಏನನ್ನೂ ಸೇವಿಸಬೇಡಿ.
12. ಸದಾಪುಷ್ಪದ ಬೇರಿನ ಪುಡಿಯನ್ನು ತಯಾರಿಸಿ. ಈ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ ನಂತರ ಮಜ್ಜಿಗೆ ಕುಡಿಯಿರಿ. ಪ್ರಸವಾನಂತರದ ಬೊಜ್ಜಿಗೆ ಇದು ರಾಮಬಾಣ.
13. ಅಲೋಪತಿ ಔಷಧಿಗಳ ಸೇವನೆಯನ್ನು ತಪ್ಪಿಸಿ. ಏಕೆಂದರೆ ಹೆಚ್ಚಿನ ಈ ಔಷಧಿಗಳಲ್ಲಿ ಸ್ಟೀರಾಯ್ಡ್ಗಳು ಮತ್ತು ನಿದ್ರೆಯ ಮಾತ್ರೆಗಳು ಸ್ಥೂಲಕಾಯತೆಯನ್ನು ಹೆಚ್ಚಿಸುತ್ತವೆ ಮತ್ತು ಅದು ಬೇಗನೆ ಹೋಗುವುದಿಲ್ಲ.
14. ದಿನಕ್ಕೆ ಎರಡು ಬಾರಿ ಕನಿಷ್ಠ 40 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡಿ. ಕೊಬ್ಬು ನಷ್ಟಕ್ಕೆ ಯೋಗ, ಮೆಟ್ಟಿಲು ಹತ್ತುವುದು, ಈಜು, ಸೈಕ್ಲಿಂಗ್ ಇವು ಉತ್ತಮ ವ್ಯಾಯಾಮವಾಗಿದೆ. ಅಲ್ಲದೆ, ನೀವು ಎದ್ದಾಗಿನಿಂದ ಮಲಗುವವರೆಗೆ ದೈಹಿಕ ಚಟುವಟಿಕೆಯನ್ನು ಮಾಡುತ್ತಿರಿ.
– ಸಂಗ್ರಹ ಮಾಹಿತಿ
Comments are closed.