ಏರ್ ಇಂಡಿಯಾ ವಿಮಾನದಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ 3 ಬಾರಿ ಹೋಗಿ ಬರುವಷ್ಟು ಪೆಟ್ರೋಲ್ ಇತ್ತು!

Ahmedabad : ಅಹಮದಾಬಾದಿನಿಂದ ಲಂಡನ್’ಗೆ ಹೊರಟ ಏರ್ ಇಂಡಿಯಾ ಅಪಘಾತದ ಸಂದರ್ಭ ಹತ್ತಿಕೊಂಡ ಜ್ವಾಲಾಗ್ನಿಯ ಉಷ್ಣಾಂಶ 1,000°C ತಲುಪಿದೆ. ನಾಯಿಗಳು ಸಹ, ಪಕ್ಷಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಚ್ಚ ಹಸುರಿನ ಮರಗಿಡಗಳು ಕೂಡಾ ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಟಿ ಹೋದವು. ಅಷ್ಟೆಲ್ಲಾ ಪ್ರಮಾದ ಆಗಲು ಮುಖ್ಯ ಕಾರಣ ಏನೂ ಅನ್ನೋದನ್ನು ನೋಡೋಣ.

ಮೊದಲನೆಯದು ವಿಮಾನದ ವೇಗ. ವಿಮಾನ ನೆಲದಿಂದ ಇನ್ನೇನು ಟೆಕ್ ಆಫ್ ಆಗುವಾಗ ವಿಮಾನದ ವೇಗವು ಗಂಟೆಗೆ 240 ಕಿಲೋ ಮೀಟರ್ ನಿಂದ 285 ಕಿಮೀ ವರೆಗೆ ಇರುತ್ತದೆ. ಆಕಾಶದಲ್ಲಿ ಹಾರಾಡುತ್ತಿರುವ ವಿಮಾನದ ವೇಗ ಹೆಚ್ಚು ಕಮ್ಮಿ ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ಇರುತ್ತದೆ. ಹಾಗಾಗಿ ನಿನ್ನೆ ಮಧ್ಯಾಹ್ನ ವಿಮಾನ ನೆಲಕ್ಕೆ ಅಪ್ಪಳಿಸಿದಾಗ ವಿಮಾನದ ವೇಗವು ಸುಮಾರು ಹೆಚ್ಚು ಕಮ್ಮಿ ಗಂಟೆಗೆ 250 ಕಿಲೋ ಮೀಟರ್ ಗಳಷ್ಟಿತ್ತು. ಈ ಸೂಪರ್ ಅನ್ನಿಸುವ ವೇಗದಲ್ಲಿ ವಿಮಾನ ನೆಲಕ್ಕೆ ಉಜ್ಜಿದಾಗ ಭಾರೀ ಪ್ರಮಾಣದ ಘರ್ಷಣೆ ಉಂಟಾಗಿ ವಿಮಾನ ಉಜ್ಜಿ, ಉರುಳಿ ಸಿಡಿದು ಹೋಗುವುದು ಗ್ಯಾರಂಟಿ. ಆದರೆ ಮೊನ್ನೆಯ ಘಟನೆಯಲ್ಲಿ ನೇರ ಕಟ್ಟಡಕ್ಕೆ ವಿಮಾನ ಬಡಿದಿತ್ತು.
ಹಾಗಾಗಿ ನಿನ್ನೆ ಅಪಘಾತದ ತೀವ್ರತೆಗೆ ಒಂದು ಕಾರಣ ಏಕಾಏಕಿ ಜೆರ್ಕ್ ಶಾಕ್ ಆಗಿ ಆದಂತಹ ಅಪಘಾತ. ಒಂದು ವೇಳೆ ಮೈದಾನಕ್ಕೆ ಬಂದು ಜಾರಿಕೊಂಡು ಇಳಿದಿದ್ದರೆ ಇನ್ನಷ್ಟು ಮಂದಿ ಬದುಕುತ್ತಿದ್ದರು. ಆದರೆ ಅಲ್ಲಿ ಏಕಾಏಕಿ ಅಪ್ಪಳಿಸಿದಂತೆ ಅಪಘಾತ ಸಂಭವಿಸಿದೆ.
ಎರಡನೆಯ ಕಾರಣ ವಿಮಾನದಲ್ಲಿದ್ದ ಬಿಳಿ ಪೆಟ್ರೋಲ್ ಬೃಹತ್ ದಾಸ್ತಾನು! ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನದಲ್ಲಿ ಅಪಘಾತದ ಸಂದರ್ಭ 1.25 ಲಕ್ಷ ಲೀಟರ್ ಇಂಧನ ಇತ್ತು ಅನ್ನೋದು ಒಂದು ವರದಿ. ಅದುವೇ 1,000°C ತಲುಪಿದ ಬೃಹತ್ ಬೆಂಕಿಗೆ ಕಾರಣವಾಯಿತು, ರಕ್ಷಣಾ ಕಾರ್ಯಾಚರಣೆ ಅಸಾಧ್ಯವಾಯಿತು.
1.25 ಲಕ್ಷ ಲೀಟರ್ ಪೆಟ್ರೋಲ್ ಅಂದರೆ ಎಷ್ಟು ಅನ್ನೋದನ್ನ ನಾವು ನಮ್ಮ ದೈನಂದಿನ ಜೀವನದ ಆಧಾರದಲ್ಲಿ ಊಹಿಸಿಕೊಳ್ಳೋಣ. ಒಂದು ಸಾಮಾನ್ಯ ಲಾರಿ ಟ್ಯಾoಕರ್ 12,000 ಲೀಟರ್ ನಿಂದ 16,000 ಲೀಟರ್ ತನಕ ಪೆಟ್ರೋಲ್ ಇಂಧನವನ್ನು ಸಾಗಿಸುತ್ತದೆ. ಅಂದರೆ 1.25 ಲಕ್ಷ ಲೀಟರುಗಳಲ್ಲಿ ಸುಮಾರು 8 ಲಾರಿ ಟ್ಯಾಂಕರ್ ಗಳಷ್ಟು ಇಂಧನ ಇರುತ್ತದೆ.
1.25 ಲಕ್ಷ ಲೀಟರ್ ಪೆಟ್ರೋಲ್ ನಲ್ಲಿ, ಒಂದು ವೇಳೆ ಲೀಟರಿಗೆ 20 ಕಿಲೋ ಮೀಟರ್ ಮೈಲೇಜ್ ಕೊಡುವ ಮಾರುತಿ ಸ್ವಿಫ್ಟ್ ಗಾಡಿಯಲ್ಲಿ ಭೂಮಿಯಿಂದ ಚಂದ್ರನಲ್ಲಿಗೆ ಹೊರಟರೆ 3 ಬಾರಿ ಚಂದ್ರನಿಗೆ ಅಪ್ ಆಂಡ್ ಡೌನ್ ಮಾಡಬಹುದು. ಅಲ್ಲದೆ ಇನ್ನೊಂದು ಬಾರಿ ಹೋಗಬಹುದು. ಅಷ್ಟು ಭಾರೀ ಪ್ರಮಾಣದ ಪೆಟ್ರೋಲ್ ವಿಮಾನದಲ್ಲಿ ಇತ್ತು. ಅದುವೇ ಇಷ್ಟು ಪ್ರಮಾಣದ ಸಾವು ನೋವಿಗೆ ಕಾರಣ ಆಯಿತು.
ಅಷ್ಟು ಪ್ರಮಾಣದ ಇಂಧನ ಒಂದೇ ಬಾರಿಗೆ ಸ್ಫೋಟಗೊಂಡು ಉರಿದರೆ ಏನಾಗಬಹುದು ನೀವೇ ಯೋಚಿಸಿ. ಪತನಗೊಂಡ ಏರ್ ಇಂಡಿಯಾ ವಿಮಾನ ಮತ್ತು ಸುತ್ತಮುತ್ತಲಿನ ತಾಪಮಾನವು ಸುಮಾರು 1,000 ಡಿಗ್ರಿ ಸೆಲ್ಸಿಯಸ್‌ಗೆ ಏರಿತು, ಇದು ರಕ್ಷಣಾ ಕಾರ್ಯಾಚರಣೆಯನ್ನು ಅತ್ಯಂತ ಕಷ್ಟಕರವಾಗಿಸಿತು ಎಂದು ಅಧಿಕಾರಿಗಳು ಗುರುವಾರ ರಾತ್ರಿ ತಿಳಿಸಿದ್ದಾರೆ.
ಅಹಮದಾಬಾದ್ ವಿಮಾನ ಅಪಘಾತದಲ್ಲಿ ಆದದ್ದು ಅದೇ. ಹಾಗಾಗಿ ವಿಮಾನ ಅಪಘಾತದಲ್ಲಿ ಬದುಕು ಉಳಿದವರು ತೀರಾ ಕಮ್ಮಿ ಅನ್ನಬಹುದು. ಆದರೆ ಓರ್ವ ವ್ಯಕ್ತಿ ಬದುಕಿ ಉಳಿದರು ಅನ್ನೋದೇ ಆಶ್ಚರ್ಯದ ಸಂಗತಿ. ವಿಶ್ವಾಸ್ ಅನ್ನೋ ಹೆಸರಿನ ಆತನನ್ನು ಮೃತ್ಯುಂಜಯ ಅನ್ನಲು ಅಡ್ಡಿಯಿಲ್ಲ. ವಿಮಾನದಲ್ಲಿದ್ದ 242 ಜನರಲ್ಲಿ 241 ಜನ ತೀರಿಕೊಂಡಿದ್ದರು. ಉಳಿದಂತೆ 24 ವೈದ್ಯ ವಿದ್ಯಾರ್ಥಿಗಳು ಅಪಘಾತದಲ್ಲಿ ಮರಣ ಹೊಂದಿದ್ದು ಇನ್ನೂ ಇತರ ಹಲವಾರು ಸ್ಥಳೀಯರು ಸಾವನ್ನಪ್ಪಿದ್ದಾರೆ. ಸಾವಿನ ಖಚಿತ ಆಂಕೆ ಸಂಖ್ಯೆಗಳು ಇನ್ನಷ್ಟೇ ಅಂತಿಮವಾಗಬೇಕಿದೆ.
Comments are closed.