Mangaluru : ಮಂಗಳೂರಲ್ಲಿ ಮತ್ತೆ ಝಳಪಿಸಿದ ತಲ್ವಾರ್- ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನ!

Share the Article

Mangaluru : ಬೂದಿ ಮುಚ್ಚಿದ ಕೆಂಡದಂತಿರುವ ಕರಾವಳಿಯ ಮಂಗಳೂರಿನಲ್ಲಿ ನಿನ್ನೆಯಷ್ಟೇ ‘ಸ್ಪೆಷಲ್ ಆಯಕ್ಷನ್ ಫೋರ್ಸ್​​’ (Special Action Force)ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಚಾಲನೆ ನೀಡಿದ್ದಾರೆ. ಈ ಮಧ್ಯೆ ಮತ್ತೆ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ವ್ಯಕ್ತಿ ಮೇಲೆ ತಲ್ವಾರ್ ನಿಂದ ದಾಳಿಗೆ ಯತ್ನಿಸಿದ ಘಟನೆ ನಡೆದಿದೆ.

ಹೌದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸಜೀನಪಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಸಜೀಪಮನ್ನೂರಿನ ಉಮರ್ ಫಾರೂಕ್ ಮೇಲೆ ದಾಳಿ ನಡೆಸಲು ಯತ್ನಿಸಲಾಗಿದೆ.

ಉಮರ್ ಫಾರೂಕ್ ಘಟನೆ ನಡೆದ ದಿನ ಮುಂಜಾನೆ ಮನೆಯಿಂದ ಜೀಪ್​ನಲ್ಲಿ ದೇರಳಕಟ್ಟೆಗೆ ತೆರಳುತ್ತಿದ್ದರು. ದೇರಾಜೆ ಬಸ್ ನಿಲ್ದಾಣದ ಬಳಿ ತಲುಪಿದಾಗ ಬೈಕ್​ನಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳಿಂದ ದಾಳಿಗೆ ಯತ್ನಿಸಲಾಗಿದೆ. ತಲ್ವಾರ್ ತಗುಲಿ ಫಾರೂಕ್ ವಾಹನದ ಸೈಡ್ ಮಿರರ್​ಗೆ ಹಾನಿ ಆಗಿದೆ. ಘಟನೆ ಬಗ್ಗೆ ನಿನ್ನೆ ಪೊಲೀಸರಿಗೆ ದೂರು ಉಮರ್ ಫಾರೂಕ್ ನೀಡಿದ್ದು, ಬಿಎನ್‌ಎಸ್ 109, 324(4) ಜೊತೆಗೆ 3(5) BNSರಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾಭಾರತದ ಆಸಕ್ತಿಕರ ಕಥೆ: ಮೀನುಗಾರನ ಮಗಳಿಗೆ ಕಣ್ಣು ಹಾಕಿದ್ದ ಕುರು ಸಾಮ್ರಾಜ್ಯದ ಅಧಿಪತಿ!

 

 

Comments are closed.