Hiriyadka: ಮಗಳ ಸಾವಿಗೆ ನೊಂದ ತಾಯಿ ಆತ್ಮಹತ್ಯೆ!

Hiriyadka : ಮೆದುಳಿನ ಆಘಾತದಿಂದ ಸಾವನ್ನಪ್ಪಿದಂತಹ ಮಗಳನ್ನು ನೆನೆದು ಕೊರಗುತ್ತಾ ತಾಯಿಯು ಕೂಡ ನಿನಗೆ ಶರಣಾಗಿರುವ ಘಟನೆ ಹಿರಿಯಡ್ಕದ ಪೆರ್ಡೂರು ಗ್ರಾಮದಲ್ಲಿ ನಡೆದಿದೆ.
ಪೆರ್ಡೂರು ಗ್ರಾಮದ ಲತಾ (52) ಮೃತ ದುರ್ದೈವಿ. ಮೃತರ ಗಂಡ ಸುಮಾರು ಇಪ್ಪತ್ತು ವರ್ಷದ ಹಿಂದೆಯೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಇನ್ನು ಕಳೆದ ಮೂರು ತಿಂಗಳ ಹಿಂದೆ ಇದ್ದ ಒಬ್ಬ ಮಗಳೂ ಕೂಡ ಮೆದುಳಿನ ಆಘಾತದಿಂದ ಸಾವನ್ನಪ್ಪಿದರು.
ಇದರಿಂದ ಜರ್ಜರಿತಗೊಂಡ ಲತಾ ಅವರು ಮನನೊಂದು ಮಲಗುವ ಕೋಣೆಯ ಮರದ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.