Banana: ತಿಂದು ಬಿಸಾಕುವ ಬಾಳೆಹಣ್ಣಿನ ಸಿಪ್ಪೆಯಲ್ಲಿ ಏನೇನಿದೆ ಗೊತ್ತಾ?

Share the Article

Banana: ಸಾಮಾನ್ಯವಾಗಿ ಕಸದ ಬುಟ್ಟಿಗೆ ಹೋಗುವ ಬಾಳೆಹಣ್ಣಿನ ಸಿಪ್ಪೆ ಈಗ ಆರೋಗ್ಯಪೂರ್ಣ ಜೀವನದ ಭಾಗವಾಗುತ್ತಿವೆ. ತಜ್ಞರ ಪ್ರಕಾರ, ಬಾಳೆಹಣ್ಣಿನ ಸಿಪ್ಪೆ ಚರ್ಮದ ಆರೋಗ್ಯ, ತುಟಿಗಳ ತೇಜಸ್ಸು ಹಾಗೂ ಹಲ್ಲುಗಳ ಸ್ವಚ್ಛತೆಗಾಗಿ ನೈಸರ್ಗಿಕ ಪರಿಹಾರವಾಗಿದೆ.

ಚರ್ಮದ ಪೋಷಣೆ:

ಒಣ ಚರ್ಮದಿಂದ ಬಳಲುವವರು ರಾತ್ರಿ ಮಲಗುವ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಮೃದುವಾಗಿ ಉಜ್ಜಿದರೆ ಉತ್ತಮ ಪರಿಣಾಮ ದೊರೆಯುತ್ತದೆ. ಸಿಪ್ಪೆಯಲ್ಲಿರುವ ವಿಟಮಿನ್‌ಗಳು ಮತ್ತು ಆಂಟಿಆಕ್ಸಿಡಂಟ್‌ಗಳು ಚರ್ಮಕ್ಕೆ ತೇವಾಂಶವನ್ನು ಪೂರೈಸುತ್ತವೆ.

ತುಟಿಗಳ ಆರೈಕೆ:

ತುಟಿ ಬಿರುಕು ಬಿಟ್ಟಿರುವವರು ಬಾಳೆಹಣ್ಣಿನ ಸಿಪ್ಪೆ ಬಳಸುವುದರಿಂದ ನೈಸರ್ಗಿಕ ತೇವಾಂಶ ಸಿಗುತ್ತದೆ. ದಿನವೂ ರಾತ್ರಿಯಲ್ಲಿ ಬಳಸಿದರೆ ತುಟಿಗಳು ಮೃದು ಮತ್ತು ಹೊಳೆಯುವಂತಾಗುತ್ತವೆ.

ಹಲ್ಲು ಬಿಳುಪಿಗೆ ಸಹಾಯ:

ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ಹಲ್ಲುಗಳಿಗೆ ಮೃದುವಾಗಿ ಉಜ್ಜಿದರೆ, ಸಿಪ್ಪೆಯಲ್ಲಿರುವ ಪೊಟ್ಯಾಸಿಯಂ ಹಾಗೂ ಮ್ಯಾಂಗನೀಸ್ ಹಲ್ಲುಗಳು ಬಿಳುಪಾಗುವಂತೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಒಂದು ವಾರ ನಿರಂತರ ಬಳಸಿದರೆ ಪರಿಣಾಮ ಸ್ಪಷ್ಟವಾಗುತ್ತದೆ.

Comments are closed.