Mangaluru: ಮಂಗಳೂರಿನ ದೇರಳಕಟ್ಟೆಯಲ್ಲಿ ಹೃದಯಾಘಾತದಿಂದ ಯುವಕ ಸಾವು!

Mangaluru: ಯುವಕನೋರ್ವನಿಗೆ ಎದೆನೋವು ಶುರುವಾಗಿ ಕೊನೆಗೆ ಆತ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಮಂಗಳೂರಿನ (Mangaluru) ದೇರಳಕಟ್ಟೆಯ ಕಾನೆಕೆರೆ ಎಂಬಲ್ಲಿ ನಡೆದಿದೆ.

ದೇರಳಕಟ್ಟೆ ಕಾನೆಕೆರೆ ನಿವಾಸಿ ಶಿವಾನಂದ ರೆಡ್ಡಿ ಎಂಬವರ ಪುತ್ರ ವಿನಯ್ ಕುಮಾರ್ ಮೃತಪಟ್ಟ ದುರ್ದೈವಿ. ಇದ್ದಕಿದ್ದಂತೆ ಇಂದು ಮುಂಜಾನೆ ಎದೆನೋವು ಕಾಣಿಸಿಕೊಂಡಿದ್ದು ಕೆಲ ಕ್ಷಣಗಳಲ್ಲೇ ಸಾವನ್ನಪ್ಪಿದ್ದಾರೆ.
Comments are closed.