SSLC ಯಲ್ಲಿ 624 ಮಾರ್ಕ್ಸ್ – ಒಂದು ಅಂಕಕ್ಕಾಗಿ ಮತ್ತೆ ಪರೀಕ್ಷೆ ಬರೆದು 625ಕ್ಕೆ 625 ಅಂಕ ಪಡೆದ ಶಿವಮೊಗ್ಗದ ವಿದ್ಯಾರ್ಥಿನಿ

Share the Article

SSLC: ಕೆಲವು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ನಾವು ಪಾಸಾದರೆ ಸಾಕು ಎಂದುಕೊಳ್ಳುತ್ತಿರುತ್ತಾರೆ. ಇನ್ನು ಕೆಲವರು ನಾವು ಓದಿದಷ್ಟು ಅಂಕ ಬಂದರೆ ಸಾಕು ಅಥವಾ ಒಂದು ಡಿಸ್ಟಿಂಕ್ಷನ್ ಮಾರ್ಕ್ ನಮ್ಮದಾದರೆ ಸಾಕು ಎಂದು ಬಯಸುತ್ತಾರೆ. ಆದರೆ ಕೆಲವೊಂದು ವಿದ್ಯಾರ್ಥಿಗಳಂತೂ ಔಟ್ ಆಫ್ ಔಟ್ ಮಾತಿಗೆ ಒಂದೆರಡು ಅಂಕ ಕಡಿಮೆಯಾದರೂ ಕೂಡ ಸಹಿಸುವುದಿಲ್ಲ. ಇದೀಗ ಶಿವಮೊಗ್ಗದಲ್ಲಿ ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದ್ದು ಛಲ ಸಾಧಿಸಿದ ವಿದ್ಯಾರ್ಥಿ ತನ್ನ ಹಠವನ್ನು ಬಿಡದೆ ಸಂಪೂರ್ಣ ಅಂಕಗಳನ್ನು ತಣ್ಣಗಾಗಿಸಿಕೊಂಡಿದ್ದಾಳೆ.

ಹೌದು, ಎಸೆಸೆಲ್ಸಿ ಪರೀಕ್ಷೆ-2ರ ಫಲಿತಾಂಶವು ಶುಕ್ರವಾರದಂದು ಪ್ರಕಟವಾಗಿದ್ದು, ಹಿಂದಿನ ಫಲಿತಾಂಶದ ವೇಳೆ ಕೇವಲ ಒಂದು ಅಂಕದಿಂದ ಎಸೆಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸುವ ಅವಕಾಶ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿನಿ, ಮತ್ತೊಮ್ಮೆ ಪರೀಕ್ಷೆ ಬರೆದು 625ಕ್ಕೆ 625ಕ್ಕೆ ಗಳಿಸಿ ಸಾಧನೆ ಮಾಡಿದ್ದಾರೆ.

ಶಿವಮೊಗ್ಗದ ಆದಿಚುಂಚನಗಿರಿ ಪ್ರೌಢ ಶಾಲೆಯ ಸಂಜನಾ.ಎಸ್ 624 ಅಂಕ ಪಡೆದಿದ್ದರು. ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಡಿತವಾಗಿತ್ತು. ಒಂದು ಅಂಕದಿಂದ ರಾಜ್ಯಕ್ಕೆ ಟಾಪರ್ ಆಗುವ ಅವಕಾಶದಿಂದ ವಂಚಿತರಾಗಿದ್ದ ಸಂಜನಾ ಮತ್ತೆ ವಿಜ್ಞಾನ ವಿಷಯ ಪರೀಕ್ಷೆ ಬರೆದು 80ಕ್ಕೆ 80 ಅಂಕ ಪಡೆದಿದ್ದಾರೆ. ಈ ಮೂಲಕ 625ಕ್ಕೆ 625ಕ್ಕೆ ಅಂಕ ಪಡೆದ ಸಾಧನೆ ಮಾಡಿದ್ದಾರೆ.

Comments are closed.