108 Ambulance service: 108 ಆಂಬುಲೆನ್ಸ್ ಇನ್ಮುಂದೆ ಸರ್ಕಾರದ ತೆಕ್ಕೆಗೆ: ಆಂಬುಲೆನ್ಸ್ ಸೇವೆ ಇನ್ನಷ್ಟು ಬಲಗೊಳ್ಳಲಿದೆ- ದಿನೇಶ್ ಗುಂಡೂರಾವ್

108 Ambulance service: ರಾಜ್ಯ ಸರ್ಕಾರವು 108 ಆಂಬುಲೆನ್ಸ್ ಸೇವೆಯನ್ನು ಜೀವಿಕೆ ಸಂಸ್ಥೆಯಿಂದ ಹಿಂಪಡೆದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತೆಕ್ಕೆಗೆ ನೀಡಿದೆ.

ಅಂಬುಲೆನ್ಸ್ ಸೇವೆಯನ್ನು ನಿಯಂತ್ರಿಸುವ ಮತ್ತು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಈ ನಿರ್ಧಾರವನ್ನು ಕೈಗೊಂಡಿದ್ದು, ಈ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ಉಳಿತಾಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇನ್ನು ಈ ನಿರ್ಧಾರಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿದ್ದು, ಈ ಸೇವೆಯು ಇನ್ನಷ್ಟು ಬಲಗೊಳ್ಳಲಿದೆ ಎಂದು ಆರೋಗ್ಯ ಸಚಿವರು ಹೇಳಿದ್ದಾರೆ.
Comments are closed.