CM Ibrahim : ವಿಮಾನ ದುರಂತ – ಪ್ರಧಾನಿ ಪೈಲೆಟಾ? ಅವರ್ಯಾಕೆ ರಾಜೀನಾಮೆ ಕೊಡಬೇಕು? ಮೋದಿ ಪರ ಸಿಎಂ ಇಬ್ರಾಹಿಂ ಬ್ಯಾಟಿಂಗ್

Share the Article

CM Ibrahim: ಗುಜರಾತಿನ ಅಹಮದಾಬಾದ್‌ನಲ್ಲಿ ಸಂಭವಿಸಿದೆ ವಿಮಾನ ಅಪಘಾತದಲ್ಲಿ ಒಟ್ಟು 265 ಜನ ಸಾವನ್ನಪ್ಪಿದ್ದಾರೆ. ಇನ್ನು ಈ ದುರಂತದ ಬಗ್ಗೆ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದ್ದು, ಕೆಲವರು ಕೇಂದ್ರ ಸರ್ಕಾರವನ್ನು ದೂರಿದ್ದಾರೆ. ಹೀಗಾಗಿ ದುರಂತಕ್ಕೆ ಹೊಣೆ ಹೊತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂಬ ಮಾತುಗಳು ಸಹ ಕೇಳಿಬರುತ್ತಿವೆ. ಇದರ ನಡುವೆಯೇ ಮಾಜಿ ಶಾಸಕ ಸಿಎಂ ಇಬ್ರಾಹಿಂ ಅವರು ಪ್ರಧಾನಿ ನರೇಂದ್ರ ಮೋದಿಯವರ ಪರ ಬ್ಯಾಟ್ ಬೀಸಿದ್ದಾರೆ.

ಹೌದು, ಮೋದಿಯವರು ರಾಜೀನಾಮೆ ಕೊಡಬೇಕು ಎಂಬ ವಿಚಾರದ ಕುರಿತು ಪ್ರತಿಕ್ರೀಯಿಸಿದ ಇಬ್ರಾಹಿಂ ಅವರು ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಈ ಪ್ರಕರಣಕ್ಕೂ ಪ್ರಧಾನಿ ಮೋದಿಗೆ ಏನು ಸಂಬಂಧ? ಮೋದಿ ಏನು ಪೈಲೆಟಾ? ಅವರು ಏಕೆ ರಾಜೀನಾಮೆ ಕೊಡಬೇಕು? ನಾಗರಿಕ ವಿಮಾನಯಾನ ಸಚಿವರು ರಾಜೀನಾಮೆ ಕೊಡಬೇಕು. ವಿಮಾನದ ಇಂಜಿನ್ ಫೆಲ್ಯೂರ್ ಆಗಿದ್ರೆ ಹೇಗೆ? ಟೇಕಾಫ್​​ಗೂ ಮುನ್ನ ಎಲ್ಲಾ ಕ್ಲಿಯರೆನ್ಸ್ ಆಗಿದೆ ಅಂತಾ ಅಲ್ವಾ? ಎಂದು ಹೇಳಿದ್ದಾರೆ.

 

Comments are closed.