Lucky number: 1206 ಅದೃಷ್ಟಸಂಖ್ಯೆಯನ್ನು ನಂಬಿದ್ದ ಮಾಜಿ ಸಿಎಂ ರೂಪಾನಿಗೆ ಕೈಕೊಟ್ಟ ಅದೃಷ್ಟ ನಂಬರ್!

Lucky number: ವಿಜಯ್ ರೂಪಾನಿ ಅವರ ಸಾವಿನ ದಿನಾಂಕದ ಬಗ್ಗೆ ಇದೀಗ ಅಚ್ಚರಿಯ ಅಂಶವೊಂದು ಬೆಳಕಿಗೆ ಬಂದಿದೆ. ಜೀವನದುದ್ದಕ್ಕೂ ಅದೃಷ್ಟ ಎಂದೇ ಅವರು ಭಾವಿಸಿಕೊಂಡು ಬಂದಿದ್ದ ಆ ಸಂಖ್ಯೆಯೇ ಅವರಿಗೆ ಮುಳುವಾಗಿದೆ. ಅಷ್ಟೇ ಅಲ್ಲ. ಅವರ ಸಾವಿನ ದಿನಾಂಕವಾಗಿ ಮಾರ್ಪಟ್ಟಿದೆ.
ವಿಜಯ್ ರೂಪಾನಿಗೆ 1206 ಎಂಬುದು ಕೇವಲ ಒಂದು ಸಂಖ್ಯೆಯಾಗಿರಲಿಲ್ಲ. ಬದಲಿಗೆ, ನಂಬಿಕೆಯ ಸಂಕೇತವಾಗಿತ್ತು. ಅದನ್ನು ಅವರು ಅದೃಷ್ಟವೆಂದೇ Lucky (number) ಭಾವಿಸಿದ್ದರು. ವಿಜಯ್ ರೂಪಾನಿ ಈ ಸಂಖ್ಯೆಯನ್ನು ಎಷ್ಟರ ಮಟ್ಟಿಗೆ ಅದೃಷ್ಟವೆಂದು ಪರಿಗಣಿಸಿದ್ದರು ಎಂದರೆ, ತಾವು ಖರೀದಿ ಮಾಡಿದ ಮೊದಲ ಸ್ಕೂಟರ್‌ನಿಂದ ಕಾರಿನವರೆಗೆ ಎಲ್ಲಾ ವಾಹನಗಳ ಸಂಖ್ಯೆ 1206 ರಿಂದಲೇ ಪ್ರಾರಂಭವಾಗುವಂತಿತ್ತು. ಆದರೆ ಅದೇ ಸಂಖ್ಯೆ ಅವರಿಗೆ ಅಶುಭಕರವಾಗಿ ( 12-06-25) ರಂದು ಅವರು ಪ್ರಾಣವನ್ನೇ ಕಳೆದುಕೊಂಡರು.
ರೂಪಾನಿ ಅವರ ಅದೃಷ್ಟ ಸಂಖ್ಯೆ 1206 ಅವರಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ ದುರದೃಷ್ಟಕರವೆಂಬುದು ಸಾಬೀತಾಯಿತು. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಜಯ್ ರೂಪಾನಿ ಅವರ ಸ್ಕೂಟರ್ ಮತ್ತು ಮೊದಲ ಕಾರು 1206 ನೋಂದಣಿ ಸಂಖ್ಯೆಯನ್ನು ಹೊಂದಿವೆ. ಈ ಕಾರು ಮತ್ತು ಸ್ಕೂಟರ್ ಈಗಲೂ ಅವರ ಮನೆಯ ಪಾರ್ಕಿಂಗ್ ಜಾಗದಲ್ಲಿವೆ ಎನ್ನಲಾಗಿದೆ.
Comments are closed.