Viral Video : ನೀರಲ್ಲಿ ಮೊಸಳೆ ಪಳಗಿಸಿ ಸ್ವಾಮೀಜಿ ಸವಾರಿ – ಅಚ್ಚರಿ ವಿಡಿಯೋ ವೈರಲ್

Viral Video : ಮೊಸಳೆ ಎಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಮನುಷ್ಯರನ್ನು ಮಾತ್ರವಲ್ಲ ಕಾಡುಪ್ರಾಣಿಗಳನ್ನು ಕೂಡ ನಡುಗಿಸಬಲ್ಲ ಜೀವಿಯದು. ಆದರೆ ಈಗ ಅಚ್ಚರಿ ಎಂಬಂತೆ ಸ್ವಾಮೀಜಿ ಒಬ್ಬರು ಈ ಮೊಸಳೆಯನ್ನು ಪಳಗಿಸಿ ನೀರಿನಲ್ಲಿ ಅದರ ಮೇಲೆ ಸವಾರಿ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೌದು, ವೈರಲ್ ಆದ ವೀಡಿಯೊದಲ್ಲಿ, ಪುರೋಹಿತನಂತೆ ವೇಷ ಧರಿಸಿದ ವ್ಯಕ್ತಿಯೊಬ್ಬರು ದೊಡ್ಡ ಮೊಸಳೆಯ ಮೇಲೆ ಕುಳಿತು ನದಿಯನ್ನು ದಾಟುತ್ತಿರುವುದನ್ನು ಕಾಣಬಹುದು. ಈ ವಿಡಿಯೋಗೆ ಜನರು ಬೇಕಾಬಿಟ್ಟಿ ಕಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ ಈ ವೀಡಿಯೊವನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಅಂದರೆ AI ಸಹಾಯದಿಂದ ಮಾಡಲಾಗಿದೆ. ಈ ವೀಡಿಯೊದ ಸತ್ಯಾಸತ್ಯತೆಯ ಬಗ್ಗೆ ಕೆಲವರು ಗ್ರೋಕ್ AI ಅನ್ನು ಪ್ರಶ್ನಿಸಿದಾಗ, ಗ್ರೋಕ್ ಈ ವೀಡಿಯೊವನ್ನು ಕಂಪ್ಯೂಟರ್ ರಚಿತ ಚಿತ್ರಣ (CGI) ಸಹಾಯದಿಂದ ಮಾತ್ರ ಮಾಡಲಾಗಿದೆ ಎಂದು ಉತ್ತರಿಸಿದೆ.
Comments are closed.