Ahmedabad Plane Crash: ಗುಜರಾತ್‌ನ ಅಹಮದಾಬಾದ್‌ನಲ್ಲಿ ವಿಮಾನ ಪತನ, 133 ಜನರು ಸಾವನ್ನಪ್ಪಿರುವ ಶಂಕೆ

Ahmedabad Plane Crash: ಗುರುವಾರ (ಜೂನ್ 12) ಮಧ್ಯಾಹ್ನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾದ ಪ್ರಯಾಣಿಕ ವಿಮಾನ ಬೋಯಿಂಗ್ 737 ಅಪಘಾತಕ್ಕೀಡಾಗಿದ್ದು, ಹೊತ್ತಿ ಉರಿಯುತ್ತಿರುವ ಚಿತ್ರಗಳು ಹೊರಬರುತ್ತಿವೆ. ಅಹಮದಾಬಾದ್‌ನ ಮೇಘನಿನಗರ ಪ್ರದೇಶದಲ್ಲಿ ಬೃಹತ್ ಬೆಂಕಿಯ ಜ್ವಾಲೆಗಳು ಕಾಣಿಸಿಕೊಂಡಿದ್ದು, ಕಪ್ಪು ಹೊಗೆ ಕಾಣಿಸುತ್ತಿದೆ. 242 ಪ್ರಯಾಣಿಕರನ್ನು ಒಳಗೊಂಡ ವಿಮಾನ ಲಂಡನ್‌ಗೆ ತೆರಳುತ್ತಿದ್ದ. ಟೇಕ್‌ಆಫ್ ಆದ ಕೂಡಲೇ ವಿಮಾನ ಅಪಘಾತಕ್ಕೀಡಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ದುರಂತ ಅಪಘಾತ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ. ಆದಾಗ್ಯೂ, ವಿಮಾನ ನಿಲ್ದಾಣದ ಗಡಿಯ ಬಳಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ನಂಬಲಾಗಿದೆ. ಕಾಣಿಸಿಕೊಂಡಿರುವ ಆರಂಭಿಕ ಚಿತ್ರದಲ್ಲಿ, ವಿಮಾನವು ಚೂರುಚೂರಾಗಿರುವುದನ್ನು ಕಾಣಬಹುದು.
An Air India plane with 242 passengers onboard has crashed in Gujarat's Ahmedabad, confirms the State Police Control Room
More details awaited pic.twitter.com/RPAYU8KfUM
— ANI (@ANI) June 12, 2025
ಚಿತ್ರದಲ್ಲಿ ವಿಮಾನದ ಒಂದು ರೆಕ್ಕೆ ಮುರಿದು ಬಿದ್ದಿರುವುದನ್ನು ಕಾಣಬಹುದು. ಅಗ್ನಿಶಾಮಕ ದಳದವರು ನೀರು ಸಿಂಪಡಿಸುವ ಮೂಲಕ ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ, ಬೆಂಕಿಯನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸಲಾಗಿದೆ. ಈ ಅಪಘಾತ ಸಂಭವಿಸಿದಾಗ ವಿಮಾನವು ವಿಮಾನ ನಿಲ್ದಾಣದಿಂದ ಹೊರಟಿದ ಕೂಡಲೇ ಅಪಘಾತಕ್ಕೀಡಾಗಿದೆ.
ಈ ವಿಮಾನದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಇದ್ದರು ಎಂದು ಹೇಳಲಾಗಿದೆ.
ಮಾಹಿತಿಯ ಪ್ರಕಾರ, ಈ ವಿಮಾನವು ಅಹಮದಾಬಾದ್‌ನಿಂದ ಲಂಡನ್‌ಗೆ ಹಾರುತ್ತಿತ್ತು ಮತ್ತು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ತಕ್ಷಣ, ಮೇಘನಿನಗರ ಪ್ರದೇಶದ ಬಳಿ ಅಪಘಾತಕ್ಕೀಡಾಯಿತು. ಮೇಘನಿನಗರ ವಿಮಾನ ನಿಲ್ದಾಣದಿಂದ ಸುಮಾರು 15 ಕಿಲೋಮೀಟರ್ ದೂರದಲ್ಲಿದೆ. ಗಾಯ ಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹಾನಿ ಸಾವು ನೋವುಗಳ ಕುರಿತು ಇನ್ನೂ ಅಧಿಕಾರಿಗಳು ದೃಢಪಡಿಸಿಲ್ಲ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.
Comments are closed.