ಗುಜರಾತ್ ವಿಮಾನ ದುರಂತ: ಮಾಜಿ ಮುಖ್ಯಮಂತ್ರಿ ಸೇರಿ ವಿಮಾನದಲ್ಲಿದ್ದವರ ಪಟ್ಟಿ ಬಿಡುಗಡೆ

Gujarath: ಗುಜರಾತಿನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಏರ್ ಪೋರ್ಟ್‌ನಿಂದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ. ವಿಮಾನದಲ್ಲಿ ಗುಜರಾತ್’ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರಿದ್ದರು. ಇದೀಗ ಅಲ್ಲಿದ್ದ ಎಲ್ಲಾ ಪ್ರಯಾಣಿಕರ ಲಿಸ್ಟ್ ಲಭ್ಯವಾಗಿದೆ.

ವಿಮಾನದಲ್ಲಿ ಒಟ್ಟು 230 ಪ್ರಯಾಣಿಕರು, 12 ಮಂದಿ ಸಿಬ್ಬಂದಿಯಿದ್ದರು. ಅಲ್ಲಿದ್ದ ಗುಜರಾತಿನ ಮಾಜಿ ಮುಖ್ಯಮಂತ್ರಿಗಳ ಆರೋಗ್ಯ ಸ್ಥಿತಿ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ. ವಿಮಾನದಲ್ಲಿ ಇದ್ದವರಲ್ಲಿ 169 ಭಾರತೀಯರು, 53 ಬ್ರಿಟನ್ ಪ್ರಜೆಗಳು, 7 ಮಂದಿ ಪೋರ್ಚುಗಲ್ ಪ್ರಜೆಗಳು ಹಾಗೂ ಓರ್ವ ಕೆನಡಾದ ವ್ಯಕ್ತಿಯಿದ್ದ ಎನ್ನುವ ಮಾಹಿತಿಯಿದೆ..
ಅಹ್ಮದಾಬಾದ್‌ನಿಂದ ಲಂಡನ್‌ಗೆ ಹೊರಟ ಈ ಏರ್ ಇಂಡಿಯಾದ ಏರ್ ಇಂಡಿಯಾ-171 ಎಂಬ ಹೆಸರಿನ ವಿಮಾನ ಪತನಗೊಂಡಿದೆ. ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1.10ಕ್ಕೆ ಈ ವಿಮಾನ ಟೇಕ್ ಅಫ್ ಆಗಿತ್ತು. ವಿಮಾನವು ಲಂಡನ್‌ನ ಗೆಟ್ರಿಕ್ ವಿಮಾನ ನಿಲ್ದಾಣ ತಲುಪಬೇಕಿತ್ತು. ಆದರೆ, ಬರೋಬ್ಬರಿ 9 ಬಾರಿ ಆಕಾಶಕ್ಕೆ ಸುತ್ತು ಹಾಕಿದ ವಿಮಾನ ಧರಾಶಾಯಿಯಾಗಿದೆ. ವಿಮಾನದಲ್ಲಿ ಇದ್ದವರು ಬದುಕುಳಿಯುವ ಸಾಧ್ಯತೆ ತೀರಾ ಕಮ್ಮಿ ಎನ್ನಲಾಗುತ್ತಿದೆ.
Comments are closed.