Alcohol Awareness: ಮದ್ಯಸೇವನೆಯಿಂದಾಗಿ ಒಂದೇ ತಿಂಗಳಲ್ಲಿ ಐವರು ಸಾವು – ಡಂಗುರ ಸಾರಿ ಜಾಗೃತಿ

Share the Article

Alcohol Awareness: ಬಾಗಲಕೋಟೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿ ಅಪಘಾತಕ್ಕೊಳಗಾಗಿ, ಆತ್ಮಹತ್ಯೆ ಮಾಡಿ ಮತ್ತು ಕುಡಿತದಿಂದ ಆರೋಗ್ಯ ಕೆಟ್ಟು ಒಂದು ತಿಂಗಳ ಒಳಗಾಗಿ ಐವರು ಮೃತಪಟ್ಟಿದ್ದಾರೆ. ಐವರ ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಈ ಸಂಬಂಧ ಗ್ರಾಮ ಪಂಚಾಯಿತಿ ಡಂಗೂರ ಸಾರಿ ಜಾಗೃತಿ ಮೂಡಿಸಲು ಯತ್ನಿಸಿದ್ದು, ಅಕ್ರಮವಾಗಿ ಸಾರಾಯಿ ಮಾರಾಟ ಮಾಡಿದರೆ ಪೊಲೀಸರ ವಶಕ್ಕೆ ನೀಡುವ ಎಚ್ಚರಿಕೆ ನೀಡಿದೆ.

 

ಈ ದುರಂತದಿಂದ ಬೇಸತ ಗ್ರಾಮಸ್ಥರು ಮದ್ಯದಂಗಡಿಗಳನ್ನು ಬಂದ್‌ ಮಾಡಿಸಲು ಪೊಲೀಸರಿಗೆ ಆಗ್ರಹಿಸಿದ್ದಾರೆ. ಮಹಿಳೆಯರು ಕಣ್ಣೀರು ಹಾಕಿ ಬೇಡಿಕೊಂಡಿದ್ದಾರೆ. ಇದೇ ಗ್ರಾಮದ ವೃದ್ಧೆ ನೀಲವ್ವ ಹಡಪದ ಅವರ ಗಂಡ ಮತ್ತು ಪುತ್ರ ಇಬ್ಬರೂ ಕುಡಿತದ ಚಟದಿಂದ ಅನಾರೋಗ್ಯಗೊಂಡು ಸಾವನ್ನಪ್ಪಿದ್ದಾರೆ. ಇದೇ ರೀತಿಯ ಕಥೆಗಳು ಇಲ್ಲಿ ಬಹಳ ಸಿಗುತ್ತವೆ. ಇನ್ನೋರ್ವ ಮುದುಕಿಯ ಅಳಿಯ ಕುಡಿತದ ದಾಸನಾಗಿ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಅಲ್ಲದೆ ಅವನ ಮಗ ಈಗ ಕೇವಲ ಹದಿನೆಂಟು ವರ್ಷದವನಾಗಿದ್ದು, ಅವನೂ ಕುಡಿತದ ಚಟಕ್ಕೆ ಬಿದ್ದಿದ್ದಾನೆ.

 

ದಿನಾ ಕುಡಿದುಕೊಂಡು ಬಂದು ಪತಿ, ಮಗ ಮನೆಯಲ್ಲಿ ‌ಜಗಳವಾಡುತ್ತಿದ್ದಾರೆ. ಇದರಿಂದ ಬದುಕು ದುಸ್ತರವಾಗಿದೆ, ಮನೆ ಹೆಂಗಸರು, ಹೆಣ್ಣು ಮಕ್ಕಳು ದುಡಿದ ಹಣವನ್ನು ಕಸಿದುಕೊಂಡು ಹೋಗಿ ಕುಡಿಯುತ್ತಾರೆ. ಇದರಿಂದ ಮನೆ ಮಹಿಳೆಯರು ಕಣ್ಣೀರು ಹಾಕುವಂತಾಗಿದೆ. ಗ್ರಾಮದಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚಿದರೆ ಇದಕ್ಕೆ ಪರಿಹಾರ ಸಿಗಬಹುದು. ಅಲ್ಲದೆ ಎಮ್ಎಸ್ಐಎಲ್ ಗಳು ಊರಿನ ಹೊರಗಡೆ ಇರೋದ್ರಿಂದ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ತಮ್ಮ ಜೇಬು ತುಂಬಿಸಕೊಳ್ಳುತ್ತಿದ್ದಾರೆ.

Comments are closed.