Fire accident: ಬೆಳಗಿನ ಜಾವ ವಿದ್ಯುತ್ ಕಂಬಕ್ಕೆ ಮೀನು ಲಾರಿ ಡಿಕ್ಕಿ – ಅಂಗಡಿಗೆ ಬೆಂಕಿ.

Fire accident: ಇಂದು ಬೆಳಗ್ಗಿನ ಜಾವ 4 ಗಂಟೆ ಸುಮಾರಿಗೆ ಮಡಿಕೇರಿಯ ಗೋಣಿಕೊಪ್ಪಲಿನ ಡಿಸಿಸಿ ಬ್ಯಾಂಕ್ ಮುಂಭಾಗ ವಿದ್ಯುತ್ ಕಂಬಕ್ಕೆ ಮೀನು ವಾಹನ ಡಿಕ್ಕಿಯಾದ ಹಿನ್ನಲೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಗೋಣಿಕೊಪ್ಪಲು ಪಾಪ್ಯುಲರ್ ಸ್ಟೋರ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಪಾಪ್ಯುಲರ್ ಅಂಗಡಿ ಮಳಿಗೆಯಲ್ಲಿದ್ದ ಫ್ಲಾಸ್ಟಿಕ್ ಸಾಮಾನುಗಳು ಬೆಂಕಿಗೆ ಆಹುತಿಯಾಗಿ ಹಾನಿ ಸಂಭವಿಸಿದೆ. ಡಿಕ್ಕಿ ಸಂಭವಹಿಸಿದ ಕೆಲವೇ ನಿಮಿಷಗಳಲ್ಲಿ ಪೊಲೀಸರು ಸೆಸ್ಕ್ ಇಲಾಖೆಗೆ ಸುದ್ದಿ ತಲುಪಿಸಿದ ಹಿನ್ನೆಲೆ ಬಾರಿ ಪ್ರಮಾಣದ ಬೆಂಕಿ ಅನಾಹುತ ತಪ್ಪಿದಂತಾಗಿದೆ. ನಷ್ಟದ ಪ್ರಮಾಣ ಇನ್ನು ತಿಳಿಯಬೇಕಿದೆ.
Comments are closed.