KANTARA Chapter 1: ಕಾಂತರ ತಂಡಕ್ಕೆ ಮತ್ತೊಂದು ಆಘಾತ: ಕಾಂತಾರ ಚಾಪ್ಟರ್-1 ಸಿನಿಮಾ ತಂಡದ ಕಲಾವಿದ ಹೃದಯಾಘಾತದಿಂದ ಸಾವು

KANTARA Chapter 1: ಕಾಂತಾರ ಚಾಪ್ಟರ್-1 ಚಲನಚಿತ್ರ ತಂಡದ ಕಲಾವಿದನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಶಿವಮೊಗ್ಗದ ತೀರ್ಥಹಳ್ಳಿಯ ಆಗುಂಬೆ ಬಳಿ ಬುಧವಾರ ರಾತ್ರಿ ನಡೆದಿದೆ. ಮೃತ ಕಲಾವಿದನನ್ನು ಕೇರಳದ ತ್ರಿಶೂರ್ ಮೂಲದ ವಿಜು.ವಿ.ಕೆ ಎಂದು ಗುರುತಿಸಲಾಗಿದ್ದು, ಅವರು ಆಗುಂಬೆ ಸಮೀಪದ ಹೋಂ ಸ್ಟೇಯಲ್ಲಿ ತಂಗಿದ್ದರು. ರಾತ್ರಿ ವೇಳೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕಾಂತರ ಚಾಪ್ಟರ್ 1 ಚಿತ್ತೀಕರಣ ಆರಂಭವಾದಗಿಂದ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಲೇ ಇದೇ. ಕಳೆದ ತಿಂಗಳಲ್ಲಿ ಇಬ್ಬರು ಕಾಂತರ ತಂಡದ ಕಲಾವಿದರು ಸಾವನ್ನಪ್ಪಿದ್ದರು. ಅದಕ್ಕೂ ಮೊದಲು ಕೆಲವೊಂದು ಕಾನೂನು ತೊಡಕುಗಳು ಎದುರಾಗಿದ್ದವು.
Comments are closed.