Accident: ರಿಕ್ಷಾ ಹಾಗೂ ಬಸ್ ನಡುವೆ ಭೀಕರ ಅಪಘಾತ: ಓರ್ವ ಬಲಿ: ನಾಲ್ವರು ಗಂಭೀರ!

Accident: ಬಸ್ಸು ಹಾಗೂ ರಿಕ್ಷಾದ ಮಧ್ಯೆ ಸಂಭವಿಸಿದ ಭೀಕರ ಅಪಘಾತದಲ್ಲಿ (Accident) ರಿಕ್ಷಾದಲ್ಲಿದ್ದ ಓರ್ವ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯ ಅಡ್ವೆ – ಕಾಂಜರಕಟ್ಟ – ಅಡ್ವೆ ಗಣಪತಿ ದೇಗುಲದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಕಾರ್ಕಳದಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಪದ್ಮಾಂಬಿಕಾ ಬಸ್ಸು ಮತ್ತು ಪಕ್ಕದ ತಿರುವಿನಿಂದ ಬಂದ ರಿಕ್ಷಾವೊಂದು ಅಡ್ಡ ಬಂದಾಗ ಬಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ಕಳೆದು ಕೊಂಡು ರಸ್ತೆ ಪಕ್ಕ ನಿಂತಿದೆ.
ರಿಕ್ಷಾದಲ್ಲಿ ಉತ್ತರ ಭಾರತ ಮೂಲದ ಕಾರ್ಮಿಕರಿದ್ದು, ಓರ್ವ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೂವರನ್ನು ಕಾರ್ಕಳ ಆಸ್ಪತ್ರೆಗೆ ಸಾಗಿಸಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಲಾಗಿದೆ .
ಪಡುಬಿದ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Comments are closed.