UT khadar: ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಯು ಟಿ ಖಾದರ್ ಪತ್ರ

UT khadar: ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವಾರು ಕೊಲೆಗಳ ಮೇಲೆ ಕೊಲೆಗಳು ನಡೆಯುತ್ತಿದ್ದು ಜಿಲ್ಲೆಯಲ್ಲಿ ಒಬ್ಬರನ್ನು ಒಬ್ಬರು ನಂಬಿದಂತಹ ಸ್ಥಿತಿ ನಿರ್ಮಾಣವಾಗಿದೆ. ಪ್ರೀತಿ ನಂಬಿಕೆ ಆತ್ಮೀಯತೆಗಳೆಲ್ಲ ಜಿಲ್ಲೆಯಲ್ಲಿ ಕಳೆದು ಹೋಗಿದೆ. ಈ ನಿಟ್ಟಿನಲ್ಲಿ ಸ್ಪೀಕರ್ ಯುಟಿ ಖಾದರ್ ತಮ್ಮ ಜಿಲ್ಲೆಯ ಜನತೆಗೆ ಪತ್ರವೊಂದನ್ನು ಬರೆದಿದ್ದಾರೆ.

ನನ್ನ ಪ್ರೀತಿಯ ದಕ್ಷಿಣ ಕನ್ನಡ ಜಿಲ್ಲೆಯ ಜನರೇ ಎಂದು ಪ್ರಾರಂಭಿಸಿರುವ ಸ್ಪೀಕರ್, ಇತ್ತೀಚಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಕೊಲೆಗಳು ಆಗುತ್ತಿರುವುದು ಎಲ್ಲರಲ್ಲೂ ಬೇಸರ ಉಂಟು ಮಾಡಿರುವಂಥದ್ದು. ವಾದ ವಿವಾದಗಳು ಪ್ರಚೋದನಕಾರಿ ಭಾಷಣಗಳು ಎಲ್ಲರಲ್ಲೂ ಅಶಾಂತಿಯನ್ನು ಉಂಟು ಮಾಡಿದೆ. ಒಬ್ಬ ರಾಜಕಾರಣಿ ಸ್ಪೀಕರ್ ಹಾಗೂ ನಿಮ್ಮ ನಡುವಿನ ಪ್ರಜೆಯಾಗಿ ನಿಮ್ಮೊಂದಿಗೆ ನಾನು ಮಾತನಾಡಲು ಬಯಸುತ್ತೇನೆ ಎಂದು ಯುಟಿ ಖಾದರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಮೊದಲಿನಿಂದಲೂ ಜಾತಿಭೇದ ಮಾಡದೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ನರು ಎಲ್ಲರೂ ಒಟ್ಟಿಗೆ ಓದಿದ್ದೇವೆ ಬೆಳೆದಿದ್ದೇವೆ ಆಟವಾಡಿದ್ದೇವೆ ಮುಂದೆಯೂ ಕೂಡ ಹೀಗೆ ಇದ್ದು ನಮ್ಮ ನಡುವೆ ಶಾಂತಿಯನ್ನು ಕಾಯ್ದುಕೊಳ್ಳೋಣ, ನಮ್ಮ ನಡುವಿನ ಸಾಮರಸ್ಯ ನಮ್ಮ ಕೈತಪ್ಪಿ ಹೋಗದಂತೆ ನೋಡಿಕೊಳ್ಳೋಣ ಎಂದಿದ್ದಾರೆ.
ಇಂಥ ಸಮಯದಲ್ಲಿ ವದಂತಿಗಳು ಸುಳ್ಳು ಮಾಹಿತಿಗಳು ಹರಡುತ್ತವೆ ಆದರೆ ಅದರ ಕುರಿತಾಗಿ ಯೋಚಿಸದೆ ಯಾವುದೇ ರೀತಿಯಲ್ಲಿ ಸಾಮರಸ್ಯ ಕೆಡಿಸದೆ ಇರೋಣ ನಾನು ಈ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿರುವುದಾಗಿಯೂ ಹಾಗೂ ಸಮಾಜವನ್ನು ಕದಲಿಸುವಲ್ಲಿ ಯಾರೇ ಪ್ರಯತ್ನ ಪಟ್ಟರು ಕೂಡ ಲೆಕ್ಕಿಸದೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಕೂಡ ಪೊಲೀಸರಿಗೆ ಆದೇಶಿಸಿದ್ದೇನೆ ಎಂದು ಸ್ಪೀಕರ್ ಹೇಳಿದ್ದಾರೆ.
Comments are closed.