Sigandur: ಸಿಗಂದೂರು ಲಾಂಚ್ ಗೇಟ್ ಬಳಿ ಸಿಬ್ಬಂದಿಗೆ ಮಚ್ಚು ತೋರಿಸಿದ ಪ್ರವಾಸಿಗ

Share the Article

Sigandur: ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಸ್ಥಳ ಸಿಗಂದೂರು ಲಾಂಚ್ ನ ಗೇಟ್ ನ ಬಳಿ ಗೇಟ್ ಸಿಬ್ಬಂದಿಗೆ ಪ್ರವಾಸಿಗನೊಬ್ಬ ಮಚ್ಚು ತೋರಿಸಿ ಹೆದರಿಸಿರುವ ಘಟನೆ ನಡೆದಿದೆ.

ಆ ವ್ಯಕ್ತಿಯು ಧಾರವಾಡ ಮೂಲದವನಾಗಿದ್ದು, ತನ್ನ ಕುಟುಂಬದೊಂದಿಗೆ ಪ್ರವಾಸಕ್ಕೆಂದು ಬಂದಿರುತ್ತಾನೆ. ವಾಹನಗಳನ್ನು ಸರತಿ ಸಾಲಿನಲ್ಲಿ ಬಿಡುವ ವಿಷಯದಲ್ಲಿ ಸಿಬ್ಬಂದಿಗೂ ಹಾಗೂ ಆತನಿಗೂ ಮಾತಿನ ಚಕಮಕಿ ನಡೆದಿದ್ದು ಈ ಸಂದರ್ಭದಲ್ಲಿ ಆತ ಮಚ್ಚು ತೋರಿಸಿದ್ದಾನೆ.

ಹಾಗೂ ಈ ವಿಷಯವನ್ನು ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದು, ಅವರು ಲಿಖಿತ ಆಧಾರದಲ್ಲಿ ದೂರು ನೀಡಿದ ಕಾರಣ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

Comments are closed.