Heavy Rain: ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ : ಅಂಗನವಾಡಿ, ಶಾಲೆಗಳು, ಹಾಗೂ ಪದವಿಪೂರ್ವ ಕಾಲೇಜಿಗಳಿಗೆ ರಜೆ ಘೋಷಣೆ

Heavy rain: ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಾಳೆ (ಜೂನ್ 12) ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಗೆ ರೆಡ್ ಅಲ್ಲೆರ್ಟ್ ಘೋಷಿಸಿದ್ದು, ಹೆಚ್ಚಿನ ಗಾಳಿ-ಮಳೆ ಇರುವ ಸಂಬಂಧ ಅಂಗನವಾಡಿ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಮುಂಜಾಗೃತಾ ಕ್ರಮವಾಗಿ ದಿನಾಂಕ 12ರಂದು ಒಂದು ದಿನಕ್ಕೆ ಸೀಮಿತವಾಗಿ ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ.
ರಜೆ ದಿನಗಳ ಪೂರಕ ಪೌಷ್ಟಿಕ ಆಹಾರವನ್ನು THR ರೂಪದಲ್ಲಿ ಫಲಾನುಭವಿಗಳಿಗೆ ಮನೆಗೆ ವಿತರಿಸಲು ಕ್ರಮ ವಹಿಸುವುದು ಮತ್ತು ಅದನ್ನ ಪೋಷಣ್ ಟ್ರಾಕರ್ ನಲ್ಲಿ ನಮೂದಿಸುವಂತೆ.
ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
Comments are closed.