Post office: ಹಿರಿಯ ನಾಗರಿಕರಿಗೆ ಸಿಹಿ ಸುದ್ದಿ: ಎಫ್ ಡಿ ಬದಲು ಹಣವನ್ನು ಇಲ್ಲಿ ಹೂಡಿಕೆ ಮಾಡಿದರೆ ಆಕರ್ಷಕ ಬಡ್ಡಿದರ ದೊರೆಯುತ್ತದೆ!!

Post office: ಸಾಮಾನ್ಯವಾಗಿ ವಯಸ್ಸಾದ ನಂತರ ಎಲ್ಲರೂ ಕೂಡ ಸ್ವಾವಲಂಬಿಯಾಗಿ ಬದುಕಬೇಕು ಎಂದು ಬಯಸುತ್ತಾರೆ. ಆ ಕಾರಣಕ್ಕಾಗಿ ಹಣವನ್ನು ಸೇರಿಸಿಡುತ್ತಾ ಬರುತ್ತಾರೆ. ಹಲವು ಮಂದಿ ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್ ಮೂಲಕ ತಮ್ಮ ಹಣವನ್ನು ಕೂಡಿಡುತ್ತಾರೆ.

ಆದರೆ ಪ್ರಸ್ತುತ ಬ್ಯಾಂಕುಗಳಲ್ಲಿ ಹಿರಿಯ ನಾಗರಿಕರಿಗೆ 6.5% ಇಂದ 7.5% ತನಕ ಬಡ್ಡಿ ದರವನ್ನು ನೀಡುತ್ತಾರೆ. ಆದರೆ ಇದಕ್ಕಿಂತಲೂ ಒಂದು ಉತ್ತಮವಾದ ಯೋಜನೆಯನ್ನು ಹಾಗೂ ಉತ್ತಮ ಬಡ್ಡಿ ದರವನ್ನು ನೀಡುವಂತಹ ಯೋಜನೆಯನ್ನು ನಾವು ಪೋಸ್ಟ್ ಆಫೀಸ್ನಲ್ಲಿ ಕಾಣಬಹುದಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆ ಆಗಿರುವುದರಿಂದ ಇದು 100% ಗ್ಯಾರೆಂಟಿ ಎದ್ದಾಗಿದೆ. ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ ಎಂಬುದು ಇದರ ಹೆಸರಾಗಿದೆ.
ಈ ಯೋಜನೆಯಲ್ಲಿ 8.2% ಬಡ್ಡಿ ದರವನ್ನ ನೀಡುತ್ತಿದ್ದು ಪ್ರಸ್ತುತ, ಬ್ಯಾಂಕುಗಳಿಗಿಂತಲೂ ಈ ಬಡ್ಡಿ ದರ ಹೆಚ್ಚಾಗಿದೆ. ಹಾಗೂ ಕನಿಷ್ಠ 1000 ರೂ ಗಳಿಂದ ಪ್ರಾರಂಭವಾಗಿ ಗರಿಷ್ಠ 30 ಲಕ್ಷದ ತನಕ ಇಲ್ಲಿ ಹಣವನ್ನು ಇಡಬಹುದಾಗಿದೆ. ಹಾಗೂ ಈ ಮೂಲಕ ವಯಸ್ಸಾದ ನಂತರ ಅದನ್ನು ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಪಡೆಯಬಹುದಾಗಿದೆ.
Comments are closed.