Rape Case: ಹೆಂಡತಿ, ಮಕ್ಕಳಿರುವ ಮಡೆನೂರು ಮನು ಹಿಂದೆ ನೀನೇಕೆ ಹೋದೆ? ನೆಟ್ಟಿಗರ ಪ್ರಶ್ನೆಗೆ ಸಂತ್ರಸ್ತೆ ಹೇಳಿದ್ದಿಷ್ಟು

Rape Case: ಕಾಮಿಡಿ ಕಿಲಾಡಿ ಖ್ಯಾತಿಯ ನಟ ಮಡೆನೂರು ಮನು ಅತ್ಯಾಚಾರ ಆರೋಪದಲ್ಲಿ ಜೈಲು ಪಾಲಾಗಿ ಈಗಷ್ಟೇ ಹೊರ ಬಂದಿದ್ದಾರೆ. ಈಗ ಅವರ ಮತ್ತೊಂದು ಆಡಿಯೋ ವೈರಲ್ ಆಗಿದೆ. ಈ ಬೆನ್ನಲ್ಲೇ ಹೆಂಡತಿ ಮಕ್ಕಳು ಇರುವ ಮಡೆನೂರು ಮನು ಹಿಂದೆ ನೀನು ಯಾಕೆ ಹೋದೆ ಎಂದು ನೆಟ್ಟಿಗರು ಸಂತ್ರಸ್ತಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ಮದುವೆ, ಮಕ್ಕಳು ಆಗಿರುವ ನಟ ಮಡೆನೂರು ಮನು (Madenur Manu) ಹಿಂದೆ ನೀನು ಏಕೆ ಹೋದೆ ಎಂದು ಅನೇಕ ನೆಟ್ಟಿಗರು ಸಂತ್ರಸ್ತರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಅವುಗಳಿಗೆ ಸಂತ್ರಸ್ತೆ ಉತ್ತರ ನೀಡಿದ್ದು ‘ಹೆಂಡ್ತಿ, ಮಗು ಇರುವವನ ಹಿಂದೆ ನೀನೇಕೆ ಹೋದೆ ಎಂದು ಕೆಲವರು ಕೇಳುತ್ತಾರೆ. ನಾನು ಅವನ ಹಿಂದೆ ಹೋಗಿಲ್ಲ. ಮೊದಲ ಬಾರಿ ಅವನು ಮಾಡಿದ್ದು ಅತ್ಯಾಚಾರ. ಅದನ್ನು ಮುಚ್ಚಿ ಹಾಕಲು ತಾಳಿಕಟ್ಟಿದ. ಇನ್ನೂ ಕೆಲವನ್ನು ನಾನು ಹೇಳಿಕೊಳ್ಳೋಕೆ ಆಗಲ್ಲ. ಅದನ್ನು ನಾನು ನ್ಯಾಯಾಲಯದ ಮುಂದೆ ಹೇಳುತ್ತೇನೆ’ ಎಂದು ಸಂತ್ರಸ್ತ ಮಹಿಳೆ ಹೇಳಿದ್ದಾರೆ.
Comments are closed.