Hiccups: ಬಿಕ್ಕಳಿಕೆ ಬಂದಾಗ ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ – ತಕ್ಷಣ ಸ್ಟಾಪ್ ಆಗುತ್ತೆ

Hiccups: ಬಿಕ್ಕಳಿಕೆ ಯಾರಿಗೆ ತಾನೇ ಬರುವುದಿಲ್ಲ ಹೇಳಿ. ಇದು ನಮಗೆಲ್ಲರಿಗೂ ಆಗಾಗ ಎದುರಾಗುತ್ತಲೇ ಇರುತ್ತದೆ. ಇದಕ್ಕೆ ಕಾರಣಗಳು ಕೆಲವಾರಿದ್ದರೂ ಯಾವ ಸಮಯದಲ್ಲಿ ಬಿಕ್ಕಳಿಕೆ ಎದುರಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಊಟದ ಅಥವಾ ಕೆಲವು ಪಾನೀಯಗಳ ಸೇವನೆಯ ಬಳಿಕ ಹೆಚ್ಚಾಗಿ ಕಾಣಿಸಿಕೊಳ್ಳಲು ನಮ್ಮ ಗಂಟಲಿನ ಮೂಲಕ ಹಾದು ಹೋಗುವ ವಾಯು ಕಾರಣ. ಕೆಲವೊಮ್ಮೆ ಇದು ಮುಜುಗರವನ್ನು ಕೂಡ ತಂದುಕೊಡುತ್ತದೆ. ಹಾಗಿದ್ದರೆ ಬಿಕ್ಕಳಿಕೆ ಬಂದಾಗ ನೀವು ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ. ತಕ್ಷಣ ಸ್ಟಾಪ್ ಆಗಿಬಿಡುತ್ತದೆ.
ಬಿಕ್ಕಳಿಕೆ ಕಡಿಮೆ ಮಾಡಲು ಇಲ್ಲಿವೆ ಸಲಹೆಗಳು:
* ಬಿಕ್ಕಳಿಕೆ ಕಡಿಮೆ ಮಾಡಲು ಗಂಟಲಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಿ.
* ತಣ್ಣೀರು ಕುಡಿಯುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
* ಬಿಕ್ಕಳಿಕೆಯನ್ನು ತ್ವರಿತವಾಗಿ ನಿವಾರಿಸಲು, ಬಾಯಿಗೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ನಿಧಾನವಾಗಿ ಅಗಿಯಿರಿ.
* ಅನ್ನ ತಿನ್ನುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
* ಮುಖವನ್ನು ತಣ್ಣೀರಿನಿಂದ ತೊಳೆಯುವುದು, ಹಾಗೆಯೇ ಕೆಲವು ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಸಹ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.
* ಬಾಯಿಯಲ್ಲಿ ಐಸ್ ಕ್ಯೂಬ್ ಅನ್ನು ಇಟ್ಟು ನಿಧಾನವಾಗಿ ಅಗಿಯುವುದರಿಂದ ಬಿಕ್ಕಳಿಕೆಯಿಂದ ಪರಿಹಾರ ಸಿಗುತ್ತದೆ.
* ಬೆಳ್ಳುಳ್ಳಿಯ ಎಸಳು ತಿನ್ನುವುದು ಅಥವಾ ಒಂದು ಚಮಚ ನಿಂಬೆ ರಸವನ್ನು ಸೇವನೆ ಮಾಡುವುದರಿಂದಲೂ ಸಹ ಬಿಕ್ಕಳಿಕೆಯನ್ನು ಕಡಿಮೆ ಮಾಡಬಹುದು.
Comments are closed.