Karkala: ಶೋರೂಮಿನಲ್ಲಿ ಸರ್ವಿಸ್ ಗೆ ಇಟ್ಟಿದ್ದ ಕಾರಿನ ಇಂಜಿನ್ ಪಾರ್ಟ್ಸ್ ಗಳನ್ನು ಕದ್ದು ಬೇರೆ ಕಾರಿಗೆ ಅಳವಡಿಸಿದ ಶೋ ರೂ೦ ಸಿಬ್ಬಂದಿಗಳು!
ಬೇಲಿಯೇ ಎದ್ದು ಹೊಲ ಮೇದ ಕಾರ್ಕಳದ ಕಾರ್ ಶೋ ರೂಮ್ ಒಂದರ ವಂಚನೆಯ ಕಥೆ!

Karkala: ಸರ್ವಿಸಿಗೆ ಇಟ್ಟಿದ್ದ ತನ್ನ ಕಾರಿನ ಇಂಜಿನ್ ಪಾರ್ಟ್ಸ್ ಗಳನ್ನು ಗಳನ್ನು ಕದ್ದು ಬೇರೆ ಕಾರಿಗೆ ಅಳವಡಿಸಿದ ಘಟನೆ ಕಾರ್ಕಳ ಶೋರೂಮ್ ಒಂದರಲ್ಲಿ ನಡೆದ ಬಗ್ಗೆ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ತನಗಾದ ವಂಚನೆಯನ್ನು ಹೇಳಿಕೊಂಡಿದ್ದಾರೆ.
ಕಾರ್ಕಳದ ಸುಜುಕಿ ಮೋಟರ್ಸ್ ಅಥಾರಿಸ್ಡ್ ಸರ್ವಿಸ್ ಎಂಬ ಹೆಸರಿನ ಕಾರ್ ಶೋರೂಮ್ ಸರ್ವಿಸ್ ಸಂಸ್ಥೆಯೇ ತನ್ನ ಶೋ ರೂಮಿನಲ್ಲಿ ಸರ್ವಿಸಿಗೆ ಇಟ್ಟಿದ್ದ ಕಾರ್ ಮಾಲಕರಿಗೆ ವಂಚಿಸಿದ ವಂಚಕ ಸಂಸ್ಥೆಯೆಂದು ವಂಚನೆಗೊಳಗಾದ ಕಾರ್ ಮಾಲಕರು ಇದೀಗ ಸಾಮಾಜಿಕ ಜಾಲತಾಣದಲ್ಲಿ ದೂರಿಕೊಂಡಿದ್ದಾರೆ.
ಈ ಘಟನೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ನಡೆದಿದ್ದು ಕಾರ್ ಮಾಲಕರು ಈ ಸರ್ವಿಸ್ ಸಂಸ್ಥೆಯಲ್ಲಿ ಸರ್ವಿಸ್ ಗೆ೦ದು ಇಟ್ಟಿದ್ದರು.ಆದರೆ ಎರಡು ದಿನಗಳ ಬಳಿಕ ಕಾರ್ ಸರ್ವಿಸ್ ಆಗಿದೆ ಎಂದು ಸಂಸ್ಥೆಯ ಮಾಲಕರು, ಸರ್ವಿಸ್ ಗೆ ಇಟ್ಟಿದ್ದ ಕಾರ್ ಮಾಲಕರಿಗೆ ತಿಳಿಸಿದ್ದರು.ಇದರಂತೆ ಕಾರ್ ಮಾಲಕರು ಶೋರೂಮ್ ಗೆ ಬಂದು ಕಾರನ್ನು ಚೆಕ್ ಮಾಡಿದಾಗ ತನ್ನ ಕಾರಿನ ನಿಜವಾದ ಎಂಜಿನ್ ಪಾರ್ಟ್ಸ್ ಗಳು ಕಾಣೆಯಾಗಿದ್ದವು. ಈ ಬಗ್ಗೆ ಕಾರ್ ಶೋರೂಮ್ ಮಾಲಕರು ಮತ್ತು ಸಿಬ್ಬಂದಿಗಳಲ್ಲಿ ವಿಚಾರಿಸಿದಾಗ ಅವರು ಹಾರಿಕೆಯ ಉತ್ತರವನ್ನು ಕೊಡತೊಡಗಿದರು ಎನ್ನಲಾಗಿದೆ. ಹೀಗಾಗಿ ಸಂಶಯಗೊಂಡ ಕಾರ್ ಮಾ ಲಕರು ಶೋರೂಮ್ನಲ್ಲಿ ಇ ರಿಸಿದ್ದ ಇತರ ಕಾರುಗಳ ಬಾನೆಟ್ ಗಳನ್ನು ತೆರೆದು ನೋಡಿದಾಗ ತನ್ನ ಕಾರಿನ ಇಂಜಿನ್ ಪಾರ್ಟ್ಸ್ಗಳು ಬೇರೆ ಕಾರಿನಲ್ಲಿ ಕಂಡುಬಂದಿದ್ದವು. ಹೀಗಾಗಿ ಕಾರ್ ಮಾಲಕರು ಈ ಬಗ್ಗೆ ಕಾರ್ ಷೋರೂಮ್ ಮಾಲಕರಲ್ಲಿ ಪ್ರಶ್ನಿಸಿದಾಗ ಕಾರ್ ಶೋರೂಮ್ ಮಾಲಕರು ತಮ್ಮದು ತಪ್ಪಾಯಿತೆಂದು ಕ್ಷಮೆ ಕೇಳಿದ್ದರು ಎನ್ನಲಾಗಿದೆ. ಇದರಿಂದಾಗಿ ಕಾರು ಮಾಲಕರು ಈ ಕಾರ್ ಷೋರೂಮ್ ನ ಸಹಿತಇತರ ಬೇರೆ ಎಲ್ಲಾ ಕಾರ್ ಶೋರೂಮ್ ಗಳ ಬಗ್ಗೆಯೂ ಬಗ್ಗೆ ಎಲ್ಲರೂ ಜಾಗೃತರಾಗಿರುವಂತೆ ವಿನಂತಿಸಿಕೊಂಡಿದ್ದಾರೆ.
Comments are closed.