No sale of RCB, clarifies United Spirits: ಆರ್‌ಸಿಬಿ ಮಾರಾಟ ಮಾಡುವುದಿಲ್ಲ-ಮಾಲೀಕರಿಂದ ಸ್ಪಷ್ಟನೆ

No sale of RCB, clarifies United Spirits: ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ ಪ್ರಾಂಚೈಸಿಯನ್ನು ಮಾರಲಾಗುತ್ತಿದೆ ಎನ್ನುವ ಮಾಧ್ಯಮಗಳಲ್ಲಿ ಬಂದ ಸುದ್ದಿಗೆ ಯುಎಸ್‌ಎಲ್ ಕಂಪನಿ ಸ್ಪಷ್ಟನೆ ನೀಡಿದೆ. ಇದು ಶುದ್ಧ ಸುಳ್ಳು ಸುದ್ದಿ. ಊಹಾಪೋಹ ಅಷ್ಟೇ. ತಂಡವನ್ನು ಮಾರಾಟ ಮಾಡುತ್ತಿಲ್ಲ ಎಂದು ಆರ್‌ಸಿಬಿಯ ಮಾಲಕಸಂಸ್ಥೆ ಯುನೈಟೆಡ್ ಸ್ಪಿರಿಟ್ಸ್ ಪತ್ರಿಕಾ ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದೆ.
ಕೇಂದ್ರ ಸರಕಾರ ಕ್ರೀಡಾಕೂಟಗಳಲ್ಲಿ ತಂಬಾಕು ಮತ್ತು ಮದ್ಯ ಉತ್ಪನ್ನಗಳ ಪ್ರಚಾರ ಮತ್ತು ಜಾಹೀರಾತು ನಡೆಯದಂತೆ ನಿರ್ಬಂಧಿಸಲು ಯೋಜಿಸಿದೆ. ಈ ಕಾರಣದಿಂದ ಆರ್‌ಸಿಬಿಯನ್ನು ಮಾರುವ ಪರಿಶೀಲನೆಯಲ್ಲಿ ಡಿಯಾಜಿಯೋ ಇದೆ ಎನ್ನುವ ಸುದ್ದಿಯನ್ನು ಬ್ಲೂಮ್ ಬರ್ಗ್ ಸುದ್ದಿ ಸಂಸ್ಥೆ ಪ್ರಕಟ ಮಾಡಿತ್ತು.
Comments are closed.